ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡನಿಗೆ ಗುಂಡಿಕ್ಕಿ ಹತ್ಯೆ‌, ದುಷ್ಕರ್ಮಿಗಳು ಎಸ್ಕೇಪ್

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪುರ್ಬಾ ಬರ್ಧಮಾನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿ ಬಿಜೆಪಿ ಮುಖಂಡ ರಾಜು ಝಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ ಮತ್ತು ಅಕ್ರಮ ಕಲ್ಲಿದ್ದಲು ವ್ಯವಹಾರ ನಡೆಸುತ್ತಿರುವ ಆರೋಪ ಹೊತ್ತಿರುವ ರಾಜು ಝಾ ಅವರು 2021ರ ರಾಜ್ಯ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದಾರೆ.

ರಾಜು ಝಾ ಮತ್ತು ಅವರ ಸ್ನೇಹಿತ ಕೊಲ್ಕತ್ತಾಗೆ ಹೋಗುತ್ತಿದ್ದಾಗ ಅವರ ಕಾರನ್ನು ಹೆದ್ದಾರಿಯಿಂದ ನಿಲ್ಲಿಸಿದಾಗ, ಮತ್ತೊಂದು ಕಾರು ಬಂದಿದ್ದು, ಅದರಲ್ಲಿದ್ದ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ರಾಜು ಝಾ ಸಾವನ್ನಪ್ಪಿದರೆ, ಅವರ ಸ್ನೇಹಿತ ಗಾಯಗೊಂಡಿದ್ದಾರೆ.

'ಬಿಜೆಪಿ ನಾಯಕ ರಾಜು ಝಾ ಅವರನ್ನು ಪುರ್ಬಾ ಬರ್ಧಮಾನ್‌ನ ಶಕ್ತಿಗಢದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ತನಿಖೆ ನಡೆಸಲಾಗುತ್ತಿದೆ' ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಕಾಮನಶಿಶ್ ಸೇನ್ ಹೇಳಿದ್ದಾರೆ.