ಪಂದ್ಯ ಮುಗಿದ ಬಳಿಕ ಪಿಚ್ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ

ಪಂದ್ಯ ಮುಗಿದ ಬಳಿಕ ಪಿಚ್ ಬಗ್ಗೆ ಶಾಕಿಂಗ್ ರಿಯಾಕ್ಷನ್ ಕೊಟ್ಟ ಹಾರ್ದಿಕ್ ಪಾಂಡ್ಯ: ಏನಂದ್ರು ನೋಡಿ
ಕೊನೆಯ ಓವರ್ ವರೆಗೂ ನಡೆದ ಭಾರತ-ನ್ಯೂಜಿಲೆಂಡ್ ನಡುವಣ ದ್ವಿತೀಯ ಟಿ20 ಪಂದ್ಯ ರೋಚಕತೆ ಸೃಷ್ಟಿಸಿತ್ತು. ಪಂದ್ಯ ಮುಗಿದ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.

ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಕೊನೆಗೂ ಭಾರತ (India vs New Zealand) ರೋಚಕ ಜಯ ಸಾಧಿಸಿತು.

ಉಪ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅವರ ಎಚ್ಚರಿಕೆಯ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ 6 ವಿಕೆಟ್​ಗಳ ಗೆಲುವು ಕಂಡಿತು. ಈ ಮೂಲಕ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-1 ಅಂಕಗಳ ಅಂತರದ ಸಮಬಲ ಸಾಧಿಸಿದೆ. ಕೊನೆಯ ಓವರ್ ವರೆಗೂ ನಡೆದ ಲೋಸ್ಕೋರ್ ಗೇಮ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದು ಸುಳ್ಳಲ್ಲ. ಈ ಪಿಚ್ ಆರೀತಿಯಲ್ಲಿತ್ತು. ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ.

”ನಾನು ಯಾವಾಗಲು ಪಂದ್ಯವನ್ನು ಫಿನಿಶ್ ಮಾಡುವ ಭರವಸೆ ಹೊಂದಿರುತ್ತೇನೆ. ಆದರೆ, ಈ ಬಾರಿ ಅದು ಅಂತಿಮ ಹಂತದ ವರೆಗೆ ತಲುಪಿತು. ಈ ಎಲ್ಲ ಪಂದ್ಯಗಳು ಮುಖ್ಯವಾದ ಕ್ಷಣಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ಭಯ ಪಡುವ ಅವಶ್ಯಕತೆಯಿಲ್ಲ. ನೀವು ಸ್ಟ್ರೈಕ್ ರೊಟೇಟ್ ಮಾಡುತ್ತಿದ್ದರೆ ಯಾವುದೇ ಒತ್ತಡ ಇರುವುದಿಲ್ಲ. ನಾವು ಅದೇ ಸೂತ್ರವನ್ನು ಅನುಸರಿಸಿದೆವು. ನಿಜ ಹೇಳಬೇಕೆಂದರೆ ಇದೊಂದು ಶಾಕಿಂಗ್ ವಿಕೆಟ್. ಒಂದೇ ಮಾದರಿಯಲ್ಲಿ ಎರಡೂ ತಂಡಗಳ ಆಟ ನಡೆಯಿತು. ಈ ಪಿಚ್ ಅಂತು ನನಗೆ ಅಚ್ಚರಿ ತಂದಿದ್ದು ನಿಜ,” ಎಂಬುದು ಹಾರ್ದಿಕ್ ಪಾಂಡ್ಯ ಮಾತು.

”ಈ ಪಿಚ್​ನಲ್ಲಿ ನೀವು 120 ರನ್ ಗಳಿಸಿದರೂ ಅದು ಗೆಲುವಿನ ಟಾರ್ಗೆಟ್ ಆಗಿದೆ. ಬೌಲರ್‌ಗಳು ತಮ್ಮ ಯೋಜನೆಗಳನ್ನು ಚೆನ್ನಾಗಿ ಅರಿತುಕೊಂಡಿದ್ದರು. ನಾವು ಸ್ಪಿನ್ನರ್‌ಗಳನ್ನು ರೊಟೇಟ್ ಮಾಡುತ್ತಲೇ ಇದ್ದೆವು. ಡ್ಯೂ ಇದರಲ್ಲಿ ಹೆಚ್ಚು ಪಾತ್ರ ವಹಿಸಲಿಲ್ಲ. ನ್ಯೂಜಿಲೆಂಡ್ ತಂಡದಲ್ಲಿ ನಮಗಿಂತ ಹೆಚ್ಚು ಸ್ಪಿನ್ನರ್​ಗಳಿದ್ದರು. ಹೀಗಾಗಿ ಈ ಪಂದ್ಯ ಚೆನ್ನಾಗಿ ಸಾಗುತ್ತಿತ್ತು. ಮುಂದಿನ ಪಂದ್ಯವನ್ನು ಎದುರು ನೋಡುತ್ತಿದ್ದೇವೆ,” ಎಂದು ಹಾರ್ದಿಕ್ ಹೇಳಿದ್ದಾರೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿ ಅಲ್ಪ ಮೊತ್ತದ ಟಾರ್ಗೆಟ್ ನೀಡಿತ್ತು. ಕಿವೀಸ್ ಪರ ನಾಯಕ ಮಿಚೆಕ್ ಸ್ಯಾಂಟನರ್ 19 ರನ್ ಗಳಿಸಿದ್ದೇ ಹೆಚ್ಚು. ಉಳಿದ ಯಾವ ಬ್ಯಾಟರ್​ಗಳ ಸ್ಕೋರ್ 15ರ ಗಡಿ ದಾಟಲಿಲ್ಲ. ಭಾರತ ಪರ ಅರ್ಶ್​ದೀಪ್ 2, ಪಾಂಡ್ಯ, ಸುಂದರ್, ಚಹಲ್, ಹೂಡ ಹಾಗೂ ಕುಲ್ದೀಪ್ ತಲಾ 1 ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂದು ಎಸೆತ ಇರುವಂತೆಯೇ ರೋಚಕ 6 ವಿಕೆಟ್​ಗಳ ಜಯ ಸಾಧಿಸಿತು. ಈ ಮೂಲಕ ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ 1-1 ಅಂತದಿಂದ ಸಮಬಲ ಸಾಧಿಸಿದೆ.

ವಿಶೇಷ ಎಂದರೆ ಈ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡದ ಕಡೆಯಿಂದ ಒಂದೂ ಸಿಕ್ಸರ್ ದಾಖಲಾಗಲಿಲ್ಲ. ಭಾರತದಲ್ಲಿ ಒಂದೂ ಸಿಕ್ಸರ್ ಇಲ್ಲದೇ ಇನ್ನಿಂಗ್ಸ್ ಮುಕ್ತಾಯ ಮಾಡಿದ ಕಳಪೆ ಸಾಧನೆಯನ್ನು ಕಿವೀಸ್ ಮಾಡಿದೆ. 31 ಎಸೆತಗಳಲ್ಲಿ 1 ಫೋರ್ ಜೊತೆಗೆ ಅಜೇಯ 26 ರನ್ ಕಲೆಹಾಕಿದ ಸೂರ್ಯಕುಮಾರ್ ಯಾದವ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು. ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ಅಜೇಯ 15 ರನ್ ಬಾರಿಸಿದರು. ಅಂತಿಮ ನಿರ್ಣಾಯಕ ಟಿ20 ಪಂದ್ಯ ಫೆಬ್ರವರಿ 1 ರಂದು ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇ