ದಾವಣರೆಯಲ್ಲಿ ಪ್ರಿಯಕರನಿಗಾಗಿ ಗಂಡನನ್ನೇ ಹತ್ಯೆಗೈದ ಪತ್ನಿ; ತನಿಖೆ ವೇಳೆ ಕೊಲೆಯ ರಹಸ್ಯ ಬಯಲು

ದಾವಣರೆಯಲ್ಲಿ ಪ್ರಿಯಕರನಿಗಾಗಿ ಗಂಡನನ್ನೇ ಹತ್ಯೆಗೈದ ಪತ್ನಿ; ತನಿಖೆ ವೇಳೆ ಕೊಲೆಯ ರಹಸ್ಯ ಬಯಲು

ದಾವಣಗೆರೆ: ಜಿಲ್ಲೆಯ ರಿಂಗ್‌ ರಸ್ತೆಯಲ್ಲಿ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸತ್ಯಾಂಶಗಳು ಹೊರಬಿದ್ದಿದೆ.

ಪತ್ನಿ ಶ್ವೇತಾ ಪ್ರಿಯಕರನ ಜೊತೆ ಸಂಚು ರೂಪಿಸಿ ಗಂಡನನ್ನೇ ಕೊಲೆ ಮಾಡಿದ್ದಾಳೆ ಎಂಬುದನ್ನ ಪೊಲೀಸರ ತನಿಖೆವೇಳೆ ಬಾಯಿಬಿಟ್ಟಿದ್ದಾಳೆ.

ಪ್ರಿಯಕರ ಚಂದ್ರಶೇಖರ್ ರಾತ್ರಿ ವೇಳೆ ಗಂಡ ಮಹಾಂತೇಶ್‍ನನ್ನ ಕರೆದುಕೊಂಡು ಹೋಗಿ ಮದ್ಯದಲ್ಲಿ ನಿದ್ರೆ ಮಾತ್ರೆ ಸೇರಿಸಿ ಕುಡಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ನಂತರ ಶವದ ಮೇಲೆ ಕಾರದಪುಡಿ ಹಾಕಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕುತ್ತಿಗೆ ಕತ್ತರಿಸಿದ್ದಾನೆ. ಇದೀಗ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಉ ವಿಚಾರಣೆ ನಡೆಸಿದ್ದಾಗ ಸತ್ಯಾಂಶಗಳು ಗೊತ್ತಾಗಿದೆ.

ಘಟನೆ ಹಿನ್ನೆಲೆ

ಮಾ.23 ರಂದು ದಾವಣಗೆರೆ ರಿಂಗ್‌ ರಸ್ತೆಯಲ್ಲಿ ಗಂಡ ಮಹಾಂತೇಶ್‍ನನ್ನು ಪ್ರಿಯಕರಿನಿಗಾಗಿ ಹತ್ಯೆಗೈದಿದ್ದಾಳೆ. ಹತ್ಯೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ ಗ್ರಾಮದ ನಿವಾಸಿ. ದಾವಣಗೆರೆಯಲ್ಲಿ ಕಟಿಂಗ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ.ಶ್ವೇತಾ, ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆಕೆ ಬಾಲ್ಯ ಸ್ನೇಹಿತ ಚಂದ್ರಶೇಖರ್ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ವಿದ್ಯಾನಗರ ಠಾಣೆ ಪೊಲೀಸರು ಕೊಲೆ ರಹಸ್ಯವನ್ನು ಬಯಲಿಗೆಳೆದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮುನ್ನವೇ ದೇಗುಲ ಮಾಹಾದ್ವಾರ ಉದ್ಘಾಟಿಸಿದ ಸಿ.ಸಿ ಪಾಟೀಲ್‌

ಗದಗ: ಕೇಂದ್ರ ಚುನಾವಣಾ ಆಯೋಗವು ಇಂದು ದೆಹಲಿಯಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದು, ಕೆಲವೇ ಕ್ಷಣಗಳಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಲಿದೆ.

ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸಿಎಂ ಕಾರ್ಯಕ್ರಮಗಳೆಲ್ಲ ರದ್ದು ಮಾಡಿದ್ದಾರೆ. ಇನ್ನೇನಿ ಕೆಲವೇ ಕ್ಷಣಗಳಲ್ಲಿ ದಿನಾಂಕ ಘೋಷಣೆಯಾಗಲಿದೆ ಹೀಗಾಗಿ ಇದಕ್ಕೂ ಮುನ್ನವೇ ಲೋಕೋಪಯೋಗಿ ಸಚಿವ ಸಿ.ಸಿ ಪಾಟೀಲ್‌ ಖಾಸಗಿ ವಾಹನದಲ್ಲಿ ಬಂದು ದೇವಾಲಯದ ಮಹಾದ್ವಾರದ ಉದ್ಘಾಟನೆ ನೆರವೇರಿಸಿದ್ದಾರೆ.ಗದಗ ನಗರದ ಚೇತನಾ ಕ್ಯಾಂಟೀನ್ ಸರ್ಕಲ್​​ನಲ್ಲಿರುವ ಶ್ರೀ ಕ್ಷೇತ್ರ ಕೈಲಾಸ ವರಸಿದ್ಧಿ‌ ಗಣಪತಿ ದೇವಸ್ಥಾನದ ಮಹಾದ್ವಾರವನ್ನ ಉದ್ಘಾಟಿಸಿದ್ದಾರೆ.