ತುಮಕೂರು ಜಿಲ್ಲೆಯ ʼದೇವರಾಯ ಸುತ್ತಮುತ್ತ ಚಿರತೆ ಪ್ರತ್ಯಕ್ಷʼ : ಭಯಭೀತರಾದ ಸ್ಥಳೀಯರು

ತುಮಕೂರು : ಜಿಲ್ಲೆಯ ದೇವರಾಯ ಪಟ್ಟಣದ ಸುತ್ತಮುತ್ತ ಚಿರತೆ ಪ್ರತ್ಯಕ್ಷಗೊಂಡಿದ್ದು, ಸಿಸಿ ಕ್ಯಾಮರಾದಲ್ಲಿ ಚಿರತೆ ಓಡಾಟದ ದೃಶ್ಯಗಳನ್ನು ಕಂಡು ಸ್ಥಳೀಯರ ಜನರು ಭಯಭೀತರಾಗಿದ್ದಾರೆ.
ಚಿರತೆ ಓಡಾಡುತ್ತಿರುವ ದೃಶ್ಯ ನಿವಾಸದ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕಳೆದೊಂದು ತಿಂಗಳಲ್ಲಿ 5 ಬೀದಿನಾಯಿಗಳನ್ನು ಚಿರತೆ ಬಲಿ ಪಡೆದುಕೊಂಡಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಚಿರತೆ ಪ್ರತ್ಯಕ್ಷ ಸುದ್ದಿ ತಿಳಿದು ಸುತ್ತಮುತ್ತಲಿನ ಜನರು ಬೆಚ್ಚಬಿದ್ದಿದ್ಧಾರೆ ಮನೆಯಿಂದ ಆಚೆ ಬರೋದಕ್ಕೂ ಹಿಂದೇಟು ಹಾಕುವಂತಾಗಿದೆ ಕೂಡಲೇ ಚಿರತೆ ಸೆರೆ ಹಿಡಿಯೋದಕ್ಕೆ ಗ್ರಾಮಸ್ಥರು ಅರಣ್ಯಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.