ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ..? : ಶಾಸಕ ಸಿ.ಟಿ.ರವಿ

ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ..? : ಶಾಸಕ ಸಿ.ಟಿ.ರವಿ

ಬೆಂಗಳೂರು : ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಶಾಸಕ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಸಿಟಿ ರವಿ ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ, ಅವರು ನನ್ನ ಜೊತೆ ಮಾತನಾಡಿಯೇ ಟಿಕೆಟ್ ಕೇಳಿದ್ದಾರೆ ಎಂದು ಸಿ,ಟಿ ರವಿ ಹೇಳಿದರು.ಯಾರೇ ಅಭ್ಯರ್ಥಿಯಾದರೂ ನನಗೆ ಸಂತೋಷವಿದೆ, ನಾನು ಸಂಸದ, ಶಾಸಕನಾಗಬೇಕೇ ಎಂದು ಪಕ್ಷ ತೀರ್ಮಾನಿಸುತ್ತೆ. ಮಾತನಾಡಿದ ಸಿಟಿ ರವಿ ತಿಮ್ಮಯ್ಯ ಚಿಕ್ಕಮಗಳೂರು ಬಿಜೆಪಿ ಟಿಕೆಟ್ ಕೇಳಿದ್ದರಲ್ಲಿ ತಪ್ಪೇನಿದೆ ಎಂದು ಹೇಳಿದರು. ಸಿ.ಟಿ ರವಿ ಕುಡಿದು, ಗಾಂಜಾ ಸೇವಿಸಿ ಮಾತಾಡುತ್ತಾರೆ ಎಂಬ ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ತಿರುಗೇಟು ನೀಡಿದ ಸಿ.ಟಿ ರವಿ ವೈಚಾರಿಕವಾಗಿ ನನ್ನನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ನಾಯಕರನ್ನು ನೋಡಿ ಈ ಮಾತು ಹೇಳುತ್ತಿದ್ದಾರೆ. ನನ್ನ ವಿರುದ್ಧ ಮಾತನಾಡಲು ಬಂದರೆ ಅವರ ಎಲ್ಲ ವಿಚಾರಗಳನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ.