ಜೆಡಿಎಸ್ ಗೆ ಬಿಗ್ ಶಾಕ್: 300ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ಸಚಿವ ಸೋಮಶೇಖರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

ಬೆಂಗಳೂರು: ಬಿಜೆಪಿಯ ತತ್ವ, ಸಿದ್ಧಾಂತ ಮತ್ತು ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಬಂದಿರುವುದರಿಂದ ಪಕ್ಷಕ್ಕೆ ಹೆಚ್ಚಿನ ಶಕ್ತಿ ಬಂದಂತಾಗಿದೆ ಎಂದು ಸಹಕಾರ ಸಚಿವರಾದ ಎಸ್ .ಟಿ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಸೂಲಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡಬಸ್ತಿ ಹಾಗೂ ಚಿಕ್ಕಬಸ್ತಿ ಗ್ರಾಮದ ಸುಮಾರು 300ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಕ್ಷದ ಶಾಲು ಹಾಕಿ ಬಿಜೆಪಿ ಬಾವುಟ ನೀಡಿ ಬರಮಾಡಿಕೊಂಡು ಮಾತನಾಡಿದ ಸಚಿವರು, ವಿರೋದ ಪಕ್ಷದವರು ನಾಲ್ಕು ಮುಕ್ಕಾಲು ವರ್ಷಗಳಿಂದ ಯಾವುದೇ ರೀತಿಯ ಜನ ಸಂಪರ್ಕ ಹೊಂದಿರಲಿಲ್ಲ. ಚುನಾವಣೆ ಎರಡು ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಕಣ್ಣೀರು ಹಾಕಿಕೊಂಡು ಜನರ ಬಳಿ ಹೋಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕೋವಿಡ್ ಬಂದಾಗ ಕ್ಷೇತ್ರದ ಜನರು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವಾಗ ಎಲ್ಲಿ ಹೋಗಿದ್ದರು? ಆಗ ಜನರು ನೆನಪಿಗೆ ಬಂದಿರಲಿಲ್ಲವೇ ಎಂದು ಹರಿಹಾಯ್ದರು.
ಕೋವೀಡ್ ಸೋಂಕಿಗೆ ಒಳಗಾದವರಿಗೆ ಔಷಧೋಪಚಾರ, ಆಸ್ಪತ್ರೆಯಲ್ಲಿ ಬೆಡ್ ಗಳ ವ್ಯವಸ್ಥೆ ಕಲ್ಪಿಸಲಾಗಿತ್ತು. ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳುವ ಮೂಲಕ ಕುಟುಂಬ ನಿರ್ವಹಣೆ ಮಾಡುವುದಕ್ಕೆ ಮೃತಪಟ್ಟ ಕುಟುಂಬದ ಸದಸ್ಯರಿಗೆ ತಲಾ 1 ಲಕ್ಷ ರೂ. ಸಹಾಯಧನ ನೀಡಿ ನೆರವಿಗೆ ನಿಂತಿದ್ದೆ ಎಂದು ಹೇಳಿದರು.
ನಾನು ಶಾಸಕ, ಸಚಿವರಾಗಿ ಸುಮಾರು ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯದವರಿಗೆ ಸಾಕಷ್ಟು ಸವಲತ್ತುಗಳನ್ನು ನೀಡಿದ್ದೇನೆ ಎಂದರು.
ಇದೇ ಸಮಯದಲ್ಲಿ ಸೂಲಿಕೆರೆ ಗ್ರಾಮ ಪಂಚಾಯತಿ ಸದಸ್ಯ ಮೋಹನ್ ಕುಮಾರ್ ಮತ್ತು ಯಾಶಿನ್ ಇವರ ನೇತೃತ್ವದಲ್ಲಿ ಎಸ್.ಕೆ. ಅಂಜದ್ ವಾಸಿಮ್ ಪಾಷ , ವಾಸಿಮ್, ಮೆಹಬೂಬ್ ಪಾಷ, ಮುಬಾರಕ್ ಪಾಷ , ಅಜ್ಗರ್ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು.
ಸೂಲಿಬೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಸಿದ್ದರಾಜು, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ತಿಮ್ಮೇತಿಮ್ಮೇಗೌಡ. ರಾಮಸಂದ್ರ ಶಕ್ತಿ ಕೇಂದ್ರದ ಅಧ್ಯಕ್ಷ ರಾಮೋಹಳ್ಳಿ ಚೇತನ್, ಗ್ರಾಮಾಂತರ ಮಂಡಲ ಅಧ್ಯಕ್ಷ ಎಂ.ರಂಗರಾಜು ಹಾಗೂ ಮತ್ತಿತರರು ಉಪಸ್ಥಿತರಿದ್ದರು.