ಕರ್ನಾಟಕ ವಿಧಾನಸಭಾ ಚುನಾವಣೆ 2023: ಈ ಬಾರಿಯೂ ಹೆಚ್‌ಡಿ ಕುಮಾರಸ್ವಾಮಿ ಕಿಂಗ್‌ಮೇಕರ್?

ಕರ್ನಾಟಕ ವಿಧಾನಸಭಾ ಚುನಾವಣೆ 2023: ಈ ಬಾರಿಯೂ ಹೆಚ್‌ಡಿ ಕುಮಾರಸ್ವಾಮಿ ಕಿಂಗ್‌ಮೇಕರ್?

ಬೆಂಗಳೂರು ಡಿಸೆಂಬರ್ 31: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದ ಚುನಾವಣೆಗಳು ಇನ್ನೂ ದೂರವಿದೆ. ಎಲ್ಲಕ್ಕಿಂತ ಮೊದಲು ಏಪ್ರಿಲ್-ಮೇ 2023 ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಗಳಿವೆ. ಹಾಗಾಗಿಯೇ ಕರ್ನಾಟಕದಲ್ಲಿ ಚುನಾವಣಾ ಕಣದ ರಣಕಹಳೆ ಆರಂಭವಾಗಿದೆ.

ಭಾರತೀಯ ಜನತಾ ಪಕ್ಷದ ಸರ್ಕಾರವು ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಪ್ರಸ್ತುತ 3ಎ ವರ್ಗದ ಮೀಸಲಾತಿಯಲ್ಲಿ ಶೇ.4ರಷ್ಟು ಮೀಸಲಾತಿ ಪಡೆಯುತ್ತಿದ್ದು, ಶೇ.12ರಷ್ಟು ಮೀಸಲಾತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಸರ್ಕಾರ 3ಎ ಮತ್ತು 3ಬಿ ವರ್ಗದ ಮೀಸಲಾತಿಯನ್ನು ರದ್ದುಪಡಿಸಿ 2ಸಿ ಮತ್ತು 2ಡಿ ಮಾಡಿದೆ. ಒಕ್ಕಲಿಗ ಸಮುದಾಯ ಈಗ 3ಎಯಿಂದ 2ಸಿಗೆ ಸ್ಥಳಾಂತರಗೊಂಡಿದ್ದು, ಅದರಲ್ಲಿ ಪ್ರಸ್ತುತ ಶೇ.4ರಷ್ಟು ಮೀಸಲಾತಿ ಮಾತ್ರ ಇದೆ.

ಸಮುದಾಯಗಳ ಜನಸಂಖ್ಯೆಯ ಆಧಾರದ ಮೇಲೆ ಯಾವ ಸಮುದಾಯಕ್ಕೆ ಶೇಕಡವಾರು ಮೀಸಲಾತಿ ನೀಡಬೇಕು ಎಂಬ ಬಗ್ಗೆ ಮೂರು ತಿಂಗಳಲ್ಲಿ ವರದಿ ನೀಡುವಂತೆ ಆಯೋಗಕ್ಕೆ ಸೂಚಿಸಲಾಗಿದೆ. ಚುನಾವಣೆ ಘೋಷಣೆಯಾಗುವ ಮುನ್ನವೇ ಮಾರ್ಚ್ ಅಂತ್ಯದಲ್ಲಿ ಮೀಸಲಾತಿ ಕೋಟಾವನ್ನು ಹೆಚ್ಚಿಸಲು ಸರ್ಕಾರ ಉದ್ದೇಶಿಸಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಕ್ಕಲಿಗ ಸಮುದಾಯದಿಂದ ಬಂದಿದ್ದು, ಈ ಸಮುದಾಯದ ಮೇಲೆ ಉತ್ತಮ ಪ್ರಭಾವ ಹೊಂದಿದ್ದಾರೆ.

ಹಳೇ ಮೈಸೂರು ಈ ಸಮುದಾಯದ ಪ್ರಭಾವದ ಕ್ಷೇತ್ರವಾಗಿದೆ. 2018ರ ಚುನಾವಣೆಯಲ್ಲಿ ದೇವೇಗೌಡರ ಪಕ್ಷ ಜೆಡಿಎಸ್ 89 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 32 ಸ್ಥಾನಗಳನ್ನು ಪಡೆದರೆ, ಬಿಜೆಪಿ ಕೇವಲ 22 ಸ್ಥಾನಗಳನ್ನು ಪಡೆದುಕೊಂಡಿದೆ. ಈಗ ಮೀಸಲಾತಿ ಕೋಟಾ ಹೆಚ್ಚಳದಿಂದ ಒಕ್ಕಲಿಗ ಸಮುದಾಯ ತೃಪ್ತರಾದರೆ ದೇವೇಗೌಡರ ಕುಟುಂಬ ಹಾಗೂ ಕಾಂಗ್ರೆಸ್ ನ ಮತಬ್ಯಾಂಕ್ ಗೆ ಬಿಜೆಪಿ ಸೆಡ್ಡು ಹೊಡೆಯಲು ಸಾಧ್ಯವಾಗುತ್ತದೆ.