ಕತ್ತು ಹಿಸುಕಿ ಮಹಿಳೆಯ ಬರ್ಬರ ಕೊಲೆ; ಕಾರಣ
ಕಲಬುರಗಿ: ಕತ್ತು ಹಿಸುಕಿ ಮಹಿಳೆಯ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ ನಡೆದಿದೆ. ಮಹಾನಂದ ರಾಜು ಅಟ್ಟದಮನಿ (22) ಕೊಲೆಯಾದ ಮಹಿಳೆ.
ವರದಕ್ಷಿಣೆ ಕಿರುಕುಳಕ್ಕಾಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಮಹಾನಂದ ಪೋಷಕರು ಆರೋಪಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ರಾಜು ಅಟ್ಟದಮನಿ ಜೊತೆ ಮದುವೆಯಾಗಿದ್ದಳು. ಮದುವೆಯಾದ ಬಳಿಕ ಸರಿಯಾಗಿ ಊಟ ಕೊಡದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆ ವಾರ್ಷಿಕೊತ್ಸವಕ್ಕೆ ಬಂಗಾರ ನೀಡುವಂತೆ ಬೇಡಿಕೆ ಅಳಿಯ ರಾಜು ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಬಂಗಾರ ಕೊಡೋಕೆ ಆಗದೆ ಇರುವ ಹಿನ್ನಲೆಯಲ್ಲಿ ರಾಜು ಮತ್ತು ಆತನ ಕುಟುಂಬಸ್ಥರಿಂದ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ