ಈ ಬಾರಿ ಐಪಿಎಲ್‌ನಲ್ಲಿ ವಿರಾಟ ದಾಖಲೆ ಬರೆಯಲಿದ್ದಾರೆ ಕೊಹ್ಲಿ ! ಆಗಲಿದ್ದಾರೆ ವಿಶ್ವದ ಮೊದಲ ಸಾಧಕ
ವಿರಾಟ್ ಕೊಹ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟ್ಸ್‌ಮನ್. ಐಪಿಎಲ್ ನಲ್ಲಿ ಆರ್‌ಸಿಬಿ ಪರ ಆದಿ ರನ್ ಗಳ ಮಳೆಗರೆದಿದ್ದಾರೆ. ವಿರಾಟ್ ಕೊಹ್ಲಿ 9 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿದ್ದರು.
ಈ ಸಾಧನೆ ಮಾಡಿದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ ವಿರಾಟ್ :
ಪಂದ್ಯಗಳನ್ನು ಆಡಿರುವ ಕೊಹ್ಲಿ ಇದುವರೆಗೆ 6624 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. ಮುಂಬರುವ ಐಪಿಎಲ್ ಸೀಸನ್‌ನಲ್ಲಿ ಕೊಹ್ಲಿ ಇನ್ನು 376 ರನ್ ಗಳಿಸಿದರೆ, ಈ ಟೂರ್ನಿಯಲ್ಲಿ 7000 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅವರ ಈಗಿನ ಫಾರ್ಮ್ ನೋಡಿದರೆ ಈ ದಾಖಲೆಯನ್ನು ಕೊಹ್ಲಿ ಸುಲಭವಾಗಿ ತಲುಪುವಂತಿದೆ.
2016ರಲ್ಲಿ ಬೌಲರ್ ಗಳ ಬೆವರಿಳಿಸಿದ್ದ ವಿರಾಟ್ :
2016 ರ ಐಪಿಎಲ್‌ನಲ್ಲಿಆರ್‌ಸಿಬಿ ಪರ ಆಡುವಾಗ ಅನೇಕ ದೊಡ್ಡ ದಾಖಲೆಗಳನ್ನು ಮಾಡಿದ್ದರು. ಈ ಋತುವಿನಲ್ಲಿ ವಿರಾಟ್ 4 ಶತಕಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲ, ಐಪಿಎಲ್ ಇತಿಹಾಸದಲ್ಲಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದರು. ವಿರಾಟ್ ಈ ಋತುವಿನಲ್ಲಿ 973 ರನ್ ಗಳಿಸಿದ್ದರು. ಇದುವರೆಗೆ ಯಾರೂ ಈ ದಾಖಲೆಯನ್ನು ಮುರಿಯುವುದು ಸಾಧ್ಯವಾಗಲಿಲ್ಲ.
ಐಪಿಎಲ್‌ನಲ್ಲಿನ ಅಂಕಿ ಅಂಶಗಳು ಹೀಗಿವೆ :
ವಿರಾಟ್ ಕೊಹ್ಲಿ ಅವರ ಐಪಿಎಲ್ ಅಂಕಿಅಂಶಗಳನ್ನು ನೋಡುವುದಾದರೆ, ಅವರು ಐಪಿಎಲ್‌ನಲ್ಲಿ 223 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 6,624 ರನ್ ಗಳಿಸಿದ್ದಾರೆ. ಇದರೊಂದಿಗೆ ಒಂದೇ ಪಂದ್ಯಗಳಲ್ಲಿ 5 ಶತಕ ಮತ್ತು 44 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 113 ರನ್.