ಅನಗತ್ಯವಾಗಿ ಗುರಿಯಾಗುತ್ತಿದ್ದಾರೆ ಕೆಎಲ್ ರಾಹುಲ್: ಕನ್ನಡಿಗನ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರ

ಅನಗತ್ಯವಾಗಿ ಗುರಿಯಾಗುತ್ತಿದ್ದಾರೆ ಕೆಎಲ್ ರಾಹುಲ್: ಕನ್ನಡಿಗನ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರ

ಟೀಮ್ ಇಂಡಿಯಾದ ಅನುಭವಿ ಆಟಗಾರ ಕೆಎಲ್ ರಾಹುಲ್ ಇತ್ತೀಚೆಗೆ ಎಲ್ಲಾ ಮಾದರಿಯಲ್ಲಿಯೂ ವಿಫಲವಾಗುತ್ತಿದ್ದು ಸಾಕಷ್ಟು ಟೀಕೆಯನ್ನು ಎದುರಿಸುತ್ತಿದ್ದಾರೆ. ವೈಟ್‌ಬಾಲ್ ಮಾದರಿಯಲ್ಲಿನ ಟೀಕೆಗಳ ಬಳಿಕ ಟೆಸ್ಟ್ ತಂಡದ ಆಡುವ ಬಳಗದಿಂದಲೂ ಕೆಎಲ್ ರಾಹುಲ್ ಹೊರಗುಳಿಯಬೇಕು ಎಂಬ ಅಭಿಪ್ರಾಯಗಳು ಜೋರಾಗುತ್ತಿದೆ.

ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದು ರಾಹುಲ್ ಅನಗತ್ಯವಾಗಿ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ ಎಂದಿದ್ದಾರೆ.

ನಾಗ್ಪುರದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಕೆಲ್ ರಾಹುಲ್ ಕೇವಲ 20 ರನ್‌ಗಳ ರನ್‌ಗಳನ್ನು ಮಾತ್ರವೇ ಗಳಿಸಿದ್ದರು. ಈ ಪಂದ್ಯವನ್ನು ಭಾರತ 132 ರನ್‌ಗಳ ಬೃಹತ್ ಅಂತರದಿಂದ ಗೆದ್ದುಕೊಂಡಿತ್ತು. ಇದೀಗ ಎರಡನೇ ಪಂದ್ಯವನ್ನಾಡಲು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಸಜ್ಜಾಗಿದೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೆಚ್ಚಿನ ಬದಲಾವಣೆಗಳು ಇರುವುದಿಲ್ಲ ಎಂದಿದ್ದಾರೆ. ಗಾಯದಿಂದ ಚೇತರಿಕೆ ಕಂಡಿರುವ ಶ್ರೇಯಸ್ ಐಯ್ಯರ್ ಸೂರ್ಯಕುಮಾರ್ ಯಾದವ್ ಬದಲಿಗೆ ಕಣಕ್ಕಿಳಿಯಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಭಾರತ ತಂಡದಲ್ಲಿ ಹೆಚ್ಚಿನ ಬದಲಾವಣೆಗೆ ಅವಕಾಶವಿದೆ ಎಂದು ನನಗೆ ಅನಿಸುತ್ತಿಲ್ಲ. ಕೇವಲ ಇಂದು ಬದಲಾವಣೆ ಮಾಡಬಹುದಾಗಿದ್ದು ಸೂರ್ಯಕುಮಾರ್ ಬದಲಿಗೆ ಶ್ರೇಯಸ್ ಐಯ್ಯರ್ ಅವಕಾಶ ಪಡೆಯಬಹುದು. ಕೆಎಲ್ ರಾಹುಲ್ ಮೇಲೆ ಸಣ್ಣ ಇತ್ತಡ ಬೀಳಬಹುದು. ಆತನ ಪಾಲಿಗೆ ಇದು ಉತ್ತಮ ಪಂದ್ಯವಾಗುವ ಭರವಸೆಯಿದ್ದು ಆತ ಉತ್ತಮವಾಗಿ ಆಡಲಿದ್ದಾರೆ. ಜನರು ಆತನನ್ನು ಅನವಶ್ಯಕವಾಗಿ ಗುರಿಯಾಗಿಸುತ್ತಿದ್ದಾರೆ" ಎಂದಿದ್ದಾರೆ ಆಕಾಶ್ ಚೋಪ್ರ.