TV ಚಾನೆಲ್ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಮಾಲೀಕರ ವಿರುದ್ಧ ಕೇಸ್..!

TV ಚಾನೆಲ್ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಮಾಲೀಕರ ವಿರುದ್ಧ ಕೇಸ್..!

ಬೆಂಗಳೂರು : ಟಿವಿ ಚಾನೆಲ್ ಒಂದರ ವಿರುದ್ಧ ತಪ್ಪು ವರದಿ ಪ್ರಕಟಿಸಿದ ಸಂಜೆವಾಣಿ ಪತ್ರಿಕೆ ವಿರುದ್ಧ ಕೇಸ್ ದಾಖಲಾಗಿದೆ. ಸಂಜೆವಾಣಿ ಮಾಲೀಕ ಅಮುದನ್, ಸ್ಥಾನೀಯ ಸಂಪಾದಕ ಬಿ.ಪಿ.ಮಲ್ಲಪ್ಪ ಹಾಗೂ ಮುಖ್ಯವರದಿಗಾರ ವೈ ಎಸ್ ಎಲ್ ಸ್ವಾಮಿ ವಿರುದ್ಧ ಕೇಸ್ ದಾಖಲಾಗಿದೆ.

ಟಿವಿ ಚಾನೆಲ್ ಒಂದರ ವಿರುದ್ಧ ಸತ್ಯಾಸತ್ಯತೆ ಪರಿಶೀಲಿಸದೆ ಸಂಜೆವಾಣಿ ಪತ್ರಿಕೆ ವರದಿ ಪ್ರಕಟಿಸಿತ್ತು. ಟಿವಿ ವಾಹಿನಿಯ ವಿರುದ್ಧ FIR ದಾಖಲಾಗಿದೆ ಎಂದು ಸಂಜೆವಾಣಿ ಪತ್ರಿಕೆ ವರದಿ ಮಾಡಿತ್ತು. ವಂಚನೆ ಸಂಬಂಧ FIR ದಾಖಲಾಗಿದೆ ಎಂದು ಪತ್ರಿಕೆ ವರದಿ ಮಾಡಿತ್ತು. ಆದರೆ, ವಂಚನೆ ಸಂಬಂಧ ಯಾವುದೇ FIR ದಾಖಲಾಗಿರುವುದಿಲ್ಲ. ಇದನ್ನು ಅರಿಯದ ಪತ್ರಿಕೆಯ ವರದಿಗಾರರಾಗಲೀ, ಸಂಪಾದಕರಾಗಲೀ ಮಾಲೀಕರಾಗಲೀ, ಸತ್ಯಾಸತ್ಯತೆಯನ್ನು ಪರಿಶೀಲಿಸುವ ಗೋಜಿಗೂ ಹೋಗದೆ ವರದಿ ಮಾಡಿದ್ದಾರೆ.

ಇದು ಕೇವಲ ದ್ವೇಷದಿಂದ ಕೂಡಿದ ವರದಿಯಾಗಿದ್ದು, ಟಿವಿ ವಾಹಿನಿಯು ಪತ್ರಿಕೆ ವಿರುದ್ಧ ಕೇಸ್ ದಾಖಲಿಸಿದೆ. ಸಂಜೆವಾಣಿ ಮಾಲೀಕ ಅಮುದನ್, ಸ್ಥಾನೀಯ ಸಂಪಾದಕ ಬಿ.ಪಿ.ಮಲ್ಲಪ್ಪ ಹಾಗೂ ಮುಖ್ಯವರದಿಗಾರ ವೈ ಎಸ್ ಎಲ್ ಸ್ವಾಮಿ ಸೇರಿದಂತೆ 9 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ. ಯಾವುದೇ ಕ್ಷಣದಲ್ಲಿ ಇವರನ್ನು ಬಂಧಿಸುವ ಸಾಧ್ಯತೆ ಇದೆ.