ಮೈಸೂರಿನಲ್ಲಿ ಎಲೆಕ್ಟ್ರಿಕ್‌ ಅಂಗಡಿ ಶೆಲ್ಟರ್‌ ಮುರಿದು ಕಳ್ಳತನ; 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆಬಾಳುವ ವಸ್ತು ಕದ್ದ ಖದೀಮರು

ಮೈಸೂರಿನಲ್ಲಿ ಎಲೆಕ್ಟ್ರಿಕ್‌ ಅಂಗಡಿ ಶೆಲ್ಟರ್‌ ಮುರಿದು ಕಳ್ಳತನ; 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆಬಾಳುವ ವಸ್ತು ಕದ್ದ ಖದೀಮರು

ಮೈಸೂರು: ರಾಜ್ಯದಲ್ಲಿ ಕಳ್ಳತನ, ದರೋಡೆ, ಸುಲಿಗೆ , ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಜನರಿಗೆ ಆತಂಕ ಶುರುವಾಗಿದೆ. ಮೈಸೂರಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ.

ಎಲೆಕ್ಟ್ರಿಕ್‌ ಅಂಗಡಿ ಶೆಲ್ಟರ್‌ ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಸುಮಾರು 30 ಸಾವಿರ ಹಣ ನಗದು ಹಾಗೂ ಅಂಗಡಿಯಲ್ಲಿದ್ದ ವೈಯರ್, ಮೋಟಾರ್, ವ್ಯಾಕ್ಯೂಮ್ ಕ್ಲೀನರ್, ಲ್ಯಾಪ್ ಟಾಪ್ ಸೇರಿ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಲೆಬಾಳುವ ಎಲೆಕ್ಟ್ರಿಕಲ್​​​​ ವಸ್ತುಗಳು ಕದ್ದು ಪರಾರಿಯಾದ ಘಟನೆ ನಗರದ ದಟ್ಟಗಳ್ಳಿಯಲ್ಲಿ ನಡೆದಿದೆ.

ಶಿವಾನಂದ ಎಂಬುವರಿಗೆ ಸೇರಿದ ಎಲೆಕ್ಟ್ರಿಕಲ್​​​ ಅಂಗಡಿ ಇದಾಗಿದ್ದು, ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.