35 ಸಾವಿರಕ್ಕೆ ಸಿಗುತ್ತೆ ಈ ಬೈಕ್!

ಐಐಟಿ ದೆಹಲಿ ಮೂಲದ ಎಲೆಕ್ಟ್ರಿಕ್ ಮೊಬಿಲಿಟಿ ಸ್ಟಾರ್ಟ್ಅಪ್ ಬಾಜ್ ಬೈಕ್ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಇದರಲ್ಲಿ ಬ್ಯಾಟರಿ ವಿನಿಮಯ ಸೌಲಭ್ಯವೂ ಇದೆ. ಇದು ಮಳೆ ಮತ್ತು ಧೂಳಿನಿಂದ ರಕ್ಷಿಸಲು IP65 ರೇಟಿಂಗ್ ಅನ್ನು ಸಹ ಹೊಂದಿದೆ. ಮೇಲಾಗಿ ಅದರ ದರ ಕೇವಲ ರೂ. 35 ಸಾವಿರ ಮಾತ್ರ. ಈ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿರುವ ಬ್ಯಾಟರಿಯನ್ನು ಕೇವಲ 90 ಸೆಕೆಂಡುಗಳಲ್ಲಿ ಬದಲಾಯಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಈ ವಾಹನಕ್ಕೆ ಯಾವುದೇ ನೋಂದಣಿ ಅಗತ್ಯವಿಲ್ಲ.