'ಸೋಶಿಯಲ್ ಮೀಡಿಯಾ'ದಲ್ಲಿ ಧಿಡೀರ್ ಫೇಮಸ್ ಆಗಲು ಹಣದ ಮಳೆ ಸುರಿಸಿದ ಅಸಾಮಿ.

ಬೆಂಗಳೂರು : ಸಿಲಿಕಾನ್ ಸಿಟಿಯ ಕೆ.ಆರ್ ಮಾರ್ಕೇಟ್ ಬಳಿ ಪ್ಲೈಓವರ್ ಮೇಲಿಂದ ಹಣ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರುಣ್ ಗೆ ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಘಟನೆ ಸಂಬಂಧ ಕೆ ಆರ್ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಸಿಲಿಕಾನ್ ಸಿಟಿಯ ಕೆ.ಆರ್ ಮಾರ್ಕೇಟ್ ಬಳಿ ಪ್ಲೈಓವರ್ ಮೇಲಿಂದ ಅರುಣ್ ಎಂಬಾತ ಗರಿಗರಿಯ 10 ರೂಪಾಯಿ ನೋಟು ಸುರಿಸಿ ಎಸ್ಕೇಪ್ ಆಗಿದ್ದನು. ಮಳೆ ನೀರಿನಂತೆ ನೋಟುಗಳನ್ನು ಸುರಿದ ಫೋಟೋಗಳು ವೈರಲ್ ಆಗಿತ್ತು. ಮಾರ್ಕೇಟ್ನಲ್ಲಿ ಜನರು ಆರಿಸಿಕೊಳ್ಳಲು ಮುಗಿಬಿದ್ದಿದ್ದರು . ಹಣ ಎಸೆಯುತ್ತಿದ್ದ ವ್ಯಕ್ತಿಯನ್ನು ಗಮನಿಸಿದ ಕೆಲವರು ಫ್ಲೈ ಓವರ್ ಮೇಲೆಯೇ ವಾಹನ ನಿಲ್ಲಿಸಿ ಆತನ ಹಿಂದೆ ಓಡಿದ್ದರು. ಹಣ ಬೀಸಾಡುವ ಬದಲು ನಮಗೆ ನೀಡಿ ಅಂತ ಹೇಳಿದ್ದರು. ಆಗಸದಿಂದ ಸಿನಿಮೀಯ ರೀತಿಯಲ್ಲಿ ಹಣ ಎಸೆದ ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ, ಅರುಣ್ ಪರಿಸ್ಥಿತಿ ಏನೋ ಮಾಡಲು ಹೋಗಿ ಇನ್ನೇನು ಆಗಿದೆ.