ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ; ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ

ಸೋಮವಾರದಿಂದ ಮತ್ತೆ ಆಪರೇಷನ್ ಬುಲ್ಡೋಜರ್ ಆರಂಭ; ದೊಡ್ಡವರ ಬೇಟೆಗೆ ಜಂಟಿ ಸರ್ವೇ ಅಸ್ತ್ರ

ಬೆಂಗಳೂರು: ಬಿಬಿಎಂಪಿ ಮತ್ತೆ ಆಪರೇಷನ್ ಬುಲ್ಡೋಜರ್ ಪಾರ್ಟ್-2 ಶುರುಗೆ ಭರದ ಸಿದ್ಧತೆ ನಡೆಯುತ್ತಿದೆ.ದೊಡ್ಡವರ ರಣಬೇಟೆಗೆ ಪಾಲಿಕೆ ಈ ಬಾರಿ ಜಂಟಿ ಸರ್ವೇ ಅಸ್ತ್ರ ಪ್ರಯೋಗಕ್ಕೆ ಸಜ್ಜಾಗಿದೆ. ಸೋಮವಾರದಿಂದ

ರಾಜಕಾಲುವೆ ಒತ್ತುವರಿ ತೆರವು ಬುಲ್ಡೋಜರ್ ಪಾರ್ಟ್-2ಗೆ ಮಹದೇವಪುರದಲ್ಲಿ ಬರೋಬ್ಬರಿ 18 ಪ್ರಾಪರ್ಟಿಗಳು ಒತ್ತುವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಈ ಪ್ರಕಾರ ಸ್ಟೇ ಕಾರಣ ನೀಡಿ ತಪ್ಪಿಸಿಕೊಳ್ಳಬಾರದೆಂದು ಲೆಕ್ಕಚಾರ ಮಾಡಿ, ಸ್ಟೇ ಇರುವ ಕಡೆ ಅಧಿಕಾರಿ ಹಾಗೂ ಒತ್ತುವರಿದಾರರು ಜಂಟಿ ಸರ್ವೆ ನಡೆಸಲು ಸೂಚಿಸಲಾಗಿದೆ. ಒತ್ತುವರಿ ಕಂಡು ಬಂದರೆ ಬುಲ್ಡೋಜರ್ ಘರ್ಜನೆ ಪಕ್ಕಾ ಎನ್ನಲಾಗಿದೆ.

ನಲಪಾಡ್ ಆಕಾಡೆಮಿ, ಸಿಲ್ವರ್ ಸ್ಪ್ರಿಂಗ್ ಪ್ಲಾಟ್ ಓನರ್ಸ್ ಅಸೋಸಿಯೇಷನ್, ಪೂರ್ವ ಪಾರ್ಕ್ ರಿಡ್ಜ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್, ರೈನ್ ಬೋ ಲೇಔಟ್, ಉಮೀಯಾ ಓಲ್ಡಿಂಗ್, ಪ್ರೈವೆಟ್ ಲಿಮಿಟೆಡ್ಚ, ಇಕೋ ಸ್ಪೇಸ್, ದಿವ್ಯ ಶ್ರೀ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಪ್ರೈವೆಟ್ ಲಿಮಿಟೆಡ್. ಈ ಭಾಗಗಳಿಗೆ ಹೀಗೆ ಬಂದು ಹಾಗೇ ಹೋಗಿದ್ದ ಬುಲ್ಡೋಜರ್‌ಗಳು ಮತ್ತೆ ಆಪರೇಷನ್ ಮಾಡುತ್ತಾವೆಯೇ ಎಂಬುದು ಪ್ರಶ್ನೆಯಾಗಿದೆ.

ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲು ಬಿಬಿಎಂಪಿ ಸಿದ್ಧವಾಗಿದೆ.