ಸೇನಾ ಹೆಲಿಕಾಪ್ಟರ್ ಪತನ : ರಕ್ಷಣಾ ಸಚಿವರಿಂದ ಪ್ರಧಾನಿ ಮೋದಿಗೆ ಮಾಹಿತಿ, ತುರ್ತು ಸಂಪುಟ ಸಭೆ
ನವದೆಹಲಿ : ತಮಿಳುನಾಡಿನ ಕೂನೂರಿನಲ್ಲಿ ಹೆಲಿಕಾಪ್ಟರ್ ಅಪಘಾತ (Tamil Nadu Helicopter Crash) ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವ್ರಿಗೆ ಮಾಹಿತಿ ನೀಡಿದರು. ನಂತ್ರ ಕೇಂದ್ರ ಸಚಿವ ಸಂಪುಟದ ತುರ್ತು ಸಭೆ ಕರೆಯಲಾಗಿದೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಬಿಪಿನ್ ರಾವತ್ ಸೇರಿ 3 ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ 7 ಮೃತ ದೇಹಗಳು ಪತ್ತೆಯಾಗಿದ್ದು, ಅವ್ರ ಹೆಸ್ರುಗಳನ್ನ ಇನ್ನು ಬಹಿರಂಗ ಪಡಿಸಲಾಗಿಲ್ಲ. ಇನ್ನು ಮಿ-ಸೀರೀಸ್ ಹೆಲಿಕಾಪ್ಟರ್ ಕೊಯಮತ್ತೂರು ಮತ್ತು ಸುಲೂರ್ ನಡುವೆ ಅಪಘಾತಕ್ಕೀಡಾಗಿದೆ.
ಅಂದ್ಹಾಗೆ, ಇಲ್ಲಿಯವರೆಗೆ ಲಭ್ಯವಿರುವ ಮಾಹಿತಿಯ ಪ್ರಕಾರ, ಅಪಘಾತ ಹೆಲಿಕಾಪ್ಟರ್ ಸಿಡಿಎಸ್ ಜನರಲ್ ಬಿಪಿನ್ ರಾವತ್, ಸಿಡಿಎಸ್, ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್ ಎಸ್ ನಾಯಕ, ಲೆಫ್ಟಿನೆಂಟ್ ಹರ್ಜಿಂದರ್ ಸಿಂಗ್, ಎನ್ ಕೆ ಗುರ್ ಸೇವಕ್ ಸಿಂಗ್, ಎನ್ ಕೆ ಜಿತೇಂದ್ರ ಸಿಂಗ್, ಎಲ್/ಎನ್ ಕೆ ವಿವೇಕ್ ಕುಮಾರ್, ಎಲ್/ಎನ್ ಕೆ ಬಿ ಸಾಯಿ ತೇಜ, ಎಚ್ ಎವಿ ಸಾತ್ಪಾಲ್ ಅವರನ್ನ ಹೊತ್ತೊಯ್ಯುತ್ತಿತ್ತು.