ಸರ್ಕಾರಿ ಹಣದಲ್ಲಿ 'ಏಸು ಪ್ರತಿಮೆ' ನಿರ್ಮಿಸಿದ್ರೆ ನಿಮಗೆ ಖುಷಿನಾ..? : ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು

ಸರ್ಕಾರಿ ಹಣದಲ್ಲಿ 'ಏಸು ಪ್ರತಿಮೆ' ನಿರ್ಮಿಸಿದ್ರೆ ನಿಮಗೆ ಖುಷಿನಾ..? : ಡಿ.ಕೆ ಶಿವಕುಮಾರ್ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು : ಸರ್ಕಾರದ ಹಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದೇ ದೊಡ್ಡ ಅಪರಾಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.

ಈ ವಿಚಾರದ ಕುರಿತು ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದೆ.

ಡಿಕೆಶಿ ಅವರೇ ಸರ್ಕಾರಿ ಹಣದಲ್ಲಿ ಏಸು ಪ್ರತಿಮೆ ನಿರ್ಮಿಸಿದರೆ, ಸರ್ಕಾರಿ ಹಣದಲ್ಲಿ ಟಿಪ್ಪು ಪ್ರತಿಮೆ ನಿರ್ಮಿಸಿದರೆ ನಿಮಗೆ ಸಂತೋಷವಾಗುತಿತ್ತೇ? ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ವಿಚಾರದಲ್ಲಿ ರಾಜಕೀಯವೇಕೆ? ಎಂದು ಕಿಡಿಕಾರಿದೆ.

ಸುದ್ದಿಗಾರರ ಜೊತೆ ಮಾತನಾಡಿದ್ದ ಡಿಕೆ ಶಿವಕುಮಾರ್ ಕೆಂಪೇಗೌಡ ಪ್ರತಿಮೆಯನ್ನು ಸರ್ಕಾರದ ಹಣದಲ್ಲಿ ಮಾಡಿದ್ದೇ ಒಂದು ದೊಡ್ಡ ಅಪರಾಧ, ಏರ್ ಪೋರ್ಟ್ ನವರಿಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಿಸುತ್ತಿದ್ದರು, ಸರ್ಕಾರದ ದುಡ್ಡಲ್ಲಿ ಕಟ್ಟುವಂತಹ ಅಗತ್ಯತೆ ಏನಿತ್ತು ಎಂದು ಕೇಳಿದ್ದಾರೆ. ಏರ್ ಪೋರ್ಟ್ ಅವರೇ ಮಾಡುತ್ತಿದ್ದರು ಎಂದು ಮೊದಲೇ ಹೇಳಿದ್ದೆ, ಅವರೇನು ಧರ್ಮಕ್ಕೆ ಜಾಗ ನೀಡುತ್ತಾರಾ..? ಅವರು ಸಂಪಾದನೆ ಮಾಡಿಲ್ಲವೇ..? ವಾಣಿಜ್ಯ ಬಳಕೆಗೆ ಹೆಚ್ಚು ಜಾಗ ನೀಡಿದ್ದೇವೆ. ಸರ್ಕಾರ ಇದನ್ನು ನಿರ್ಮಿಸುವ ಅಗತ್ಯ ಏನಿತ್ತು. ಎಂದಿದ್ದಾರೆ.