ಶಾಲಾ ಮಕ್ಕಳ ಸ್ಕೂಲ್​ ಬ್ಯಾಗ್​​ ತೂಕಕ್ಕೂ ಬಂತು ಹೊಸ ನಿಯಮ! ಇನ್ಮುಂದೆ ಆರಾಮಾಗಿ ಶಾಲೆಗೆ ಹೋಗಿ

ಶಾಲಾ ಮಕ್ಕಳ ಸ್ಕೂಲ್​ ಬ್ಯಾಗ್​​ ತೂಕಕ್ಕೂ ಬಂತು ಹೊಸ ನಿಯಮ! ಇನ್ಮುಂದೆ ಆರಾಮಾಗಿ ಶಾಲೆಗೆ ಹೋಗಿ
ಪ್ರತಿನಿತ್ಯ ಶಾಲೆಗೆ (School) ಹೋಗುವ ಮಕ್ಕಳ ಬ್ಯಾಗ್​ ತೂಕ ನೋಡಿದರೆ ಸಾಕಪ್ಪಾ ಸಾಕು ಶಾಲೆ ಎಂದೆನಿಸಿ ಬಿಡುತ್ತದೆ. ಮಕ್ಕಳಿಗಿಂತ (Students) ಅವರ ಬ್ಯಾಗ್​ ತೂಕ ಹೆಚ್ಚಾಗಿರುತ್ತದೆ. ಪಾಲಕರು ಪ್ರತಿನಿತ್ಯ ಬ್ಯಾಗ್​ ಹಿಡಿದು ಶಾಲೆಗೆ ಹೋಗಿ ಮಕ್ಕಳನ್ನು ಕಳಿಸಿ ಬರುತ್ತಾರೆ.
ಮಕ್ಕಳಿಗೆ ಭಾರದ ಬ್ಯಾಗ್​ ಹೊತ್ತು ಶಾಲೆಗೆ ತೆರಳುವುದೇ ಒಂದು ಸಂಕಷ್ಟವಾಗಿದೆ. ಹಾಗಾದರೆ ಮಕ್ಕಳಿಗೆ ಬ್ಯಾಗ್​ನ ಭಾರ ಎಷ್ಟಿರಬೇಕು ಎಂದು ನಿಮಗೆ ಗೊತ್ತಾ? ಆ ಕುರಿತು ಇನ್ನಷ್ಟು ಮಾಹಿತಿ (Information) ಇಲ್ಲಿದೆ ನೋಡಿ. ಶಾಲೆಗೆ ಹೋಗುತ್ತಿರುವ ಮಕ್ಕಳನ್ನು ಕಂಡಾಗ ಮೊದಲು ನೆನಪಿಗೆ ಬರುವುದು ಅವರ ಭಾರದ ಚೀಲಗಳು (Bag). ಸುಮಾರು 30 ರಿಂದ 35 ಕೆಜಿ ತೂಕದ 10, 11 ಮತ್ತು 12 ವರ್ಷ ವಯಸ್ಸಿನ ಮಕ್ಕಳು ತಮ್ಮ ಹೆಗಲ ಮೇಲೆ ಹಲವಾರು ಕೆಜಿ ಚೀಲಗಳನ್ನು ಹೊತ್ತೊಯ್ಯುತ್ತಾರೆ.

ಈ ಶಾಲಾ ಬ್ಯಾಗ್‌ಗಳ ಭಾರದಿಂದಾಗಿ ವಿದ್ಯಾರ್ಥಿಗಳ ಭುಜಗಳು ಬಾಗುತ್ತಿವೆ. ಆ ಸಮಯದಲ್ಲಿ ಅವರನ್ನು ನೋಡಿದರೆ ಯಾರೋ ಲೋಕದ ಭಾರವನ್ನು ಹೊತ್ತಿದ್ದಾರೆ ಅನ್ನಿಸುತ್ತದೆ. ಆದರೆ ಚೀಲದ ತೂಕ ಎಷ್ಟು ಕೆಜಿ ವರೆಗೆ ಇರಬೇಕು? ಭಾರತ ಸರ್ಕಾರವು ವಿದ್ಯಾರ್ಥಿಗಳು ಯಾವ ತರಗತಿಗೆ ಹೋಗುವಾಗ ಅವರ ಬ್ಯಾಗ್​ನ ತೂಕ ಎಷ್ಟು ಇರಬೇಕೆಂದು ನಿಯಮಗಳನ್ನು ನಿರ್ಧರಿಸುವ ನೀತಿಯನ್ನು ಮಾಡಿದೆ. ಬನ್ನಿ ಅದರ ಸಂಪೂರ್ಣ ವಿವರಗಳನ್ನು ತಿಳಿಯೋಣ.

ಚಿಕ್ಕ ಮಕ್ಕಳ ಬ್ಯಾಗ್​ ತೂಕ ಎಷ್ಟಿರಬೇಕು?

ರಾಷ್ಟ್ರೀಯ ಶಾಲಾ ಬ್ಯಾಗ್ ನೀತಿಯ ಪ್ರಕಾರ, 10 ರಿಂದ 16 ಕೆಜಿ ತೂಕದ ಪೂರ್ವ ಪ್ರಾಥಮಿಕ ಹಂತದಲ್ಲಿ ಓದುತ್ತಿರುವ ಮಕ್ಕಳು ತಮ್ಮೊಂದಿಗೆ ಶಾಲಾ ಬ್ಯಾಗ್ ಕೊಂಡೊಯ್ಯುವ ಅಗತ್ಯವಿಲ್ಲ. 16 ರಿಂದ 22 ಕೆಜಿ ತೂಕದ ಒಂದನೇ ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳು ಗರಿಷ್ಠ 1.6 ರಿಂದ 2.2 ಕೆಜಿ ತೂಕದ ಚೀಲವನ್ನು ಒಯ್ಯಲು ಸೂಚಿಸಲಾಗಿದೆ.

6 ರಿಂದ 8 ನೇ ತರಗತಿಯ ಮಕ್ಕಳಿಗೆ ನಿಯಮಗಳು ಯಾವುವು?
6, 7 ಮತ್ತು 8ನೇ ತರಗತಿಯ ಮಕ್ಕಳ ತೂಕ 20 ರಿಂದ 30 ಕೆಜಿ ಇದ್ದರೆ ಗರಿಷ್ಠ 2 ರಿಂದ 3 ಕೆಜಿ ಚೀಲವನ್ನು ಶಾಲೆಗೆ ತೆಗೆದುಕೊಂಡು ಹೋಗಬೇಕು. ಆದರೆ ಅವರ ತೂಕ 25 ರಿಂದ 40 ಕೆಜಿ ಇದ್ದರೆ ಅವರು ಶಾಲೆಗೆ 2.5 ರಿಂದ 4 ಕೆಜಿ ಚೀಲವನ್ನು ಒಯ್ಯಬಹುದು ಎಂದು ಹೇಳಲಾಗಿದೆ.

9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು

9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು 2.5 ಕೆಜಿಯಿಂದ 5 ಕೆಜಿ ತೂಕದ ಚೀಲವನ್ನು ಒಯ್ಯಬಹುದು. ಇದರಲ್ಲೂ ನಿಯಮವಿದೆ. ನೀವು 9 ಅಥವಾ 10 ನೇ ತರಗತಿ ಓದುತ್ತಿದ್ದರೆ, ನಿಮ್ಮ ಬ್ಯಾಗ್ ಕೇವಲ 2.5 ಕೆಜಿಯಿಂದ 4 ಕೆಜಿಯಿಂದ 5 ಕೆಜಿ ತೂಕವಿರಬೇಕು. ನೀವು 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿದ್ದರೆ ನಿಮ್ಮ ಶಾಲಾ ಬ್ಯಾಗ್ 3.5 ರಿಂದ 5 ಕೆಜಿ ತೂಕವಿರಬೇಕು. ರಾಷ್ಟ್ರೀಯ ಸ್ಕೂಲ್ ಬ್ಯಾಗ್ ನೀತಿಯು ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಅನ್ವಯಿಸುತ್ತದೆ. ಕಳೆದ ವರ್ಷ, ದೆಹಲಿಯ ಶಿಕ್ಷಣ ನಿರ್ದೇಶನಾಲಯವು ಈ ನೀತಿಯನ್ನು ಜಾರಿಗೆ ತರುವಂತೆ ರಾಜಧಾನಿಯ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿತು.

ಜೊತೆಗೆ ದೆಹಲಿಯ ಎಲ್ಲಾ ಶಾಲೆಗಳು ತಮ್ಮ ಶಾಲೆಗಳಲ್ಲಿ ಎಸ್‌ಸಿಇಆರ್‌ಟಿ, ಎನ್‌ಸಿಇಆರ್‌ಟಿ ಮತ್ತು ಸಿಬಿಎಸ್‌ಇ ಸೂಚಿಸಿದ ಪಠ್ಯಕ್ರಮವನ್ನು ಜಾರಿಗೆ ತರಬೇಕು. ದೆಹಲಿ ಶಿಕ್ಷಣ ನಿರ್ದೇಶನಾಲಯ ತಿಳಿಸಿದೆ. ಈ ಹೊಸ ನಿಯಮದಿಂದ ಎಷ್ಟೋ ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ. ಮಕ್ಕಳು ತಮ್ಮ ತೂಕಕ್ಕೆ ಅನುಗುಣವಾದ ಭಾರದ ಬ್ಯಾಗ್​​ಗಳನ್ನು ಶಾಲೆಗೆ ಕೊಂಡೊಯ್ಯುವ ನಿಯಮ ಜಾರಿಗೆ ಬರಲಿದೆ.