ವೈಷ್ಣೋದೇವಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಟ ಶಾರುಖ್ ಖಾನ್

ವೈಷ್ಣೋದೇವಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದ ನಟ ಶಾರುಖ್ ಖಾನ್

ಖ್ಯಾತ ನಟ ಶಾರುಖ್ ಖಾನ್ ಜಮ್ಮು & ಕಾಶ್ಮೀರದ ರಿಯಾಸಿ ಜಿಲ್ಲೆಯ ತ್ರಿಕೂಟ ಬೆಟ್ಟದ ಮೇಲೆ ಇರುವ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಂಪೂರ್ಣ ಕಪ್ಪು ವಸ್ತ್ರವನ್ನು ಧರಿಸಿದ್ದ ಖಾನ್, ಭಾನುವಾರ ತಡರಾತ್ರಿ ದೇಗುಲಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ. 'ರಾತ್ರಿ 11.30 ರ ಸುಮಾರಿಗೆ ಅವರು ದೇಗುಲಕ್ಕೆ ಬಂದಿದ್ದರು. ಬಳಿಕ, ಪ್ರಾರ್ಥನೆ ಸಲ್ಲಿಸಿ ತೆರಳಿದರು' ಎಂದು ಅಧಿಕಾರಿ ಹೇಳಿದ್ದಾರೆ.