ವೀಲ್‌ಚೇರ್‌ನಲ್ಲಿ ಕುಳಿತು 'ತ್ರಂಬಕೇಶ್ವರ ಸ್ವಾಮಿ ದರ್ಶನ ಪಡೆದ 'ಮಾಜಿ ಪ್ರಧಾನಿ ಹೆಚ್‌ಡಿಡಿ '

ವೀಲ್‌ಚೇರ್‌ನಲ್ಲಿ ಕುಳಿತು 'ತ್ರಂಬಕೇಶ್ವರ ಸ್ವಾಮಿ ದರ್ಶನ ಪಡೆದ 'ಮಾಜಿ ಪ್ರಧಾನಿ ಹೆಚ್‌ಡಿಡಿ '

ಬೆಂಗಳೂರು : ನಾಡಿನೆಲ್ಲೆಡೆ ಮಾಹಾಶಿವರಾತ್ರಿ ಹಬ್ಬ ಸಂಭ್ರಮ ಹಿನ್ನೆಲೆ ಜೆ ಪಿ ನಗರದಲ್ಲಿರುವ ತ್ರಂಬಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ವೀಲ್‌ಚೇರ್‌ನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ (Former Prime Minister HD Deve Gowda) ತೆರಳಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿಶಿವ ಪೂಜೆಯನ್ನು ಮಾಡುವ ಮೂಲಕ ದೇವರ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ. ಈ ಶುಭ ದಿನದಂದೂ ತ್ರಂಬಕೇಶ್ವರ ಸ್ವಾಮಿ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ದರ್ಶನ ಪಡೆದಿದ್ದಾರೆ.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಮಾತನಾಡಿ , ನಾಡಿನ ಸಮಸ್ತ ಜನತೆಗೆ ಮಾಹಾಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಭಾರತ ದೇಶದಲ್ಲೇ ಮಹಾಶಿವರಾತ್ರಿಯಲ್ಲಿ ಅತ್ಯಂತ ಭಕ್ತ ಭಾವದಿಂದ ಪೂಜೆಸಲಾಗುತ್ತದೆ. ಪ್ರತಿ ವರ್ಷ ಭೈರವೇಶ್ವರ ದೇಗುಲದಲ್ಲಿ ಪೂಜೆ ಮಾಡುತ್ತಿದ್ದೆ. ಈ ಬಾರಿ ಹೋಗುವುದಕ್ಕೆ ಆಗಿಲ್ಲ, ಹೀಗಾಗಿ ತ್ರಂಬಕೇಶ್ವರ ಸ್ವಾಮಿ ಪೂಜೆ ಸಲ್ಲಿಸಿದೆ,ಎ ಲ್ಲರಿಗೂ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿದರು.