ವಿಧಾನಸಭೆಯಲ್ಲಿ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರ

ವಿಧಾನಸಭೆಯಲ್ಲಿ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರ

ಬೆಳಗಾವಿ : ವಿಧಾನಸಭೆಯಲ್ಲಿ ಇಂದು ನಡೆದ ಅಧಿವೇಶನದಲ್ಲಿ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ 2022 ಅಂಗೀಕಾರವಾಗಿದೆ.

ಸದನದಲ್ಲಿ ಬೆಂಗಳೂರು ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರವಾಗಿದೆ. ಈ ಕುರಿತು ಸಿಎಂ ಬೊಮ್ಮಾಯಿ ಸದನದಲ್ಲಿ ಚರ್ಚೆ ನಡೆಸಿದ್ದು, ಬೆಂಗಳೂರಿನ ಬಗ್ಗೆ ಮಾತಾಡಿ ಬೆಂಗಳೂರು ಯೋಜನೆ ಪ್ರಕಾರ ಬೆಳೆಯಲಿಲ್ಲ ಎಂದಿದ್ದಾರೆ.

ಬೆಂಗಳೂರು ನಗರ ಅತಿವೇಗವಾಗಿ ಬೆಳೆಯುವ ನಗರವಾಗಿದೆ. ನಾವು ಯೋಜನೆ ಮಾಡಿದ ಪ್ರಕಾರ ಬೆಳೆಯಲಿಲ್ಲ, ರಸ್ತೆಯಲ್ಲಿ ಅಗಲೀಕರಣ ಆಗಿಲ್ಲ, ದೊಡ್ಡ ಪ್ರಮಾಣದಲ್ಲಿ ವಾಹನಗಳು ರಸ್ತೆಗೀಳಿಯುತ್ತಿದೆ. ಬೆಂಗಳೂರಿನಲ್ಲಿ 103 ಲಕ್ಷಕ್ಕೂ ಹೆಚ್ಚು ವಾಹನವಿದೆ. ಮನೆಯಲ್ಲಿ ಮೂರು ನಾಲ್ಕು ವೆಹಿಕಲ್ಸ್ ಗಳು ಇದೆ, ಹಾಗಾಗಿ ಅಧಿವೇಶನದಲ್ಲಿ ಭೂ ಸಾರಿಗೆ ಪ್ರಾಧಿಕಾರ ವಿಧೇಯಕ ಅಂಗೀಕಾರವಾಗಿದೆ ಎಂದರು.