ವಿಜಯಪುರ: ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವ ಪತ್ತೆ

ವಿಜಯಪುರ: ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವ ಪತ್ತೆ

ವಿಜಯಪುರದ ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವಗಳು ಅನುಮಾನಾಸ್ಪದವಾಗಿ ಪತ್ತೆಯಾಗಿವೆ.

ಹೋಟೆಲ್​ ರೂಮ್‌ನಲ್ಲಿ ಇಬ್ಬರ ಶವ ಪತ್ತೆ

ವಿಜಯಪುರ : ನಗರದ ರಾಜಧಾನಿ ಹೋಟೆಲ್​ನ ರೂಮ್‌ನಲ್ಲಿ ಅನುಮಾನಾಸ್ಪದವಾಗಿ ಇಬ್ಬರ ಮೃತದೇಹ ಪತ್ತೆಯಾಗಿವೆ.

ಬಳ್ಳಾರಿ ಮೂಲದ ಸಿ.ಇಂದ್ರಕುಮಾರ ಹಾಗೂ ಮತ್ತೋರ್ವನ ಶವಗಳು ರಕ್ತದ ಮಡುವಿನಲ್ಲಿ ದೊರೆತಿದ್ದು, ಸಾಕಷ್ಟು ಅನುಮಾನ ಮೂಡಿಸಿದೆ.

ಸುದ್ದಿ ತಿಳಿದ ಗಾಂಧಿಚೌಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ​​ ತನಿಖೆ ಬಳಿಕ ತಿಳಿದು ಬರಬೇಕಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.