ವಿಜಯಪುರದಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಬಿತ್ತು ಧರ್ಮದೇಟು

ವಿಜಯಪುರದಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಬಿತ್ತು ಧರ್ಮದೇಟು

ವಿಜಯಪುರ: ಜಿಲ್ಲೆಯ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ ಕಾಲೇಜಿಗೆ ಹೋಗಿ ಬರುವ ಹುಡುಗಿಯರನ್ನು ಚುಡಾಯಿಸುತ್ತಿದ್ದ ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿದ್ದಾರೆ.

ಮಸಬಿನಾಳ ಗ್ರಾಮದ ಇಬ್ಬರು ಯುವಕರನ್ನು ಹಿಡಿದು ಸ್ಥಳೀಯರೆಲ್ಲರೂ ಸೇರಿ ಥಳಿಸಿದ್ದಾರೆ.

ಪ್ರತಿನಿತ್ಯ ಕಾಲೇಜು ಸುತ್ತಮುತ್ತ ಓಡಾಡುತ್ತಿದ್ದ ಈ ಪುಂಡರು ಹೆಣ್ಣು ಮಕ್ಕಳಿಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದರು. ಇವರಿಬ್ಬರ ಕಾಟಕ್ಕೆ ಬೇಸತ್ತು ಹುಡುಗಿಯರು ಕುಟುಂಬ್ಥರಿಗೆ ವಿಷಯ ತಿಳಿಸಿದ್ದಾರೆ.
ಗುರುವಾರ ಎಂದಿನಂತೆ ಕಾಲೇಜಿಗೆ ಹೊರಟ್ಟಿದ್ದ ಹುಡುಗಿಯರನ್ನು ಚುಡಾಯಿಸಲು ಬಂದಿದ್ದ ಯುವಕರನ್ನು ಸ್ಥಳೀಯರೇ ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಸ್ಥಳೀಯರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.