ರಷ್ಯಾದೊಂದಿಗೆ ರೂಪಾಯಿಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಭಾರತ

ರಷ್ಯಾದೊಂದಿಗೆ ರೂಪಾಯಿಯಲ್ಲಿ ವ್ಯಾಪಾರ ಒಪ್ಪಂದಕ್ಕೆ ಮುಂದಾದ ಭಾರತ

ರೂಪಾಯಿಯಲ್ಲಿ ಟ್ರೇಡ್ ಸೆಟ್ಲೇಮೆಂಟ್ ಪರಿಚಯಿಸಿದ ನಂತರ ಇದೆ ಮೊದಲ ಬಾರಿಗೆ ಮುಂದಿನ ವಾರ ರಷ್ಯಾಕ್ಕೆ ಸಾಗಣೆಯಾಗಲಿರುವ ಸರಕುಗಳ ವಹಿವಾಟು ರೂಪಾಯಿಯಲ್ಲಿ ಮಾಡಲಾಗುತ್ತದೆ. ಔಷಧ ಮತ್ತು ವಾಹನದ ಬಿಡಿ ಭಾಗಗಳಿಗಾಗಿ ರಶಿಯಾ ಹೆಚ್ಚಿನ ಬೇಡಿಕೆ ಇಟ್ಟಿರುವ ಹಿನ್ನೆಲೆ ಈ ಬೆಳೆವಣಿಗೆ ನಡೆದಿದೆ. ರೂಪಾಯಿ ವಹಿವಾಟಿಗಾಗಿ ವೋಸ್ಟ್ರೋ ಖಾತೆಗಳನ್ನು ತೆರೆಯಲು 5-6 ಬ್ಯಾಂಕ್‌ಗಳಿಗೆ ಅವಕಾಶ ನೀಡಲಾಗಿದೆ ಎಂದು ವರದಿ ಹೇಳಿದೆ.