ಯೂಟ್ಯೂಬ್ ನೋಡಿ ಪ್ರಯೋಗ ಮಾಡಲು ಹೋದ ಬಾಲಕಿ ಸಾವು

ಉಡುಪಿ: ವಿದ್ಯಾರ್ಥಿನಿಯೊಬ್ಬಳು ಯೂಟ್ಯೂಬ್ ನೋಡಿ ಪ್ರಯೋಗ ಮಾಡುವ ವೇಳೆ ಮೃತಪಟ್ಟ ಘಟನೆ ಭಾನುವಾರ ಬೆಳಕಿಗೆ ಬಂದಿದೆ.
ಉಡುಪಿಯ ಬ್ರಹ್ಮಗಿರಿಯ ಸಾಯಿರಾಧಾ ಫ್ರೈಡ್ ಅಪಾರ್ಟ್ ಮೆಂಡ್ ನಿವಾಸಿ ಪ್ರವೀಣ್ ಶೆಟ್ಟಿ ಅವರ ಪುತ್ರಿ ಮಂಗಳಾದೇವಿ(11) ಮೃತಪಟ್ಟ ಬಾಲಕಿ ಎಂದು ಹೇಳಲಾಗಿದೆ.
ಶನಿವಾರ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯ ನಡುವೆ ಬಾತ್ರೂಮ್ ಬಟ್ಟೆ ಕಟ್ಟಿ ಯಾವುದೋ ಪ್ರಯೋಗ ಮಾಡುವ ವೇಳೆ ಕುತ್ತಿಗೆಗೆ ಬಟ್ಟೆ ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎನ್ನಲಾಗಿದೆ.