ಮೆರವಣಿಗೆಯಲ್ಲಿ ಬಂದು ಮತ ಚಲಾಯಿಸಿದ ಅವಿಭಕ್ತ ಕುಟುಂಬದ 60 ಮಂದಿ

ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಮತದಾನ ಗುರುವಾರ ನಡೆದಿದೆ. ಈ ಸಂದರ್ಭದಲ್ಲಿ ಬಿಜೆಪಿ ನಾಯಕ ಸುರೇಶ್ ಪನ್ಸುರಿಯಾ ಅವರ ಅವಿಭಕ್ತ ಕುಟುಂಬದ 60 ಮಂದಿ ಸದಸ್ಯರು ಬಂದು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ. ಅಮ್ರೇಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಅವರ ಕುಟುಂಬದಲ್ಲಿ ಒಟ್ಟು 60 ಜನರು ವಾಸವಾಗಿದ್ದರೆ. ಉದ್ಯೋಗ & ಇತರ ಕಾರಣಗಳಿಂದ ದೂರ ದೂರ ಇದ್ದರೂ, ಮತಚಲಾಯಿಸಲು ಎಲ್ಲರೂ ಬಂದು ಒಟ್ಟು ಸೇರಿದ್ದಾರೆ. ಅದರಲ್ಲೂ ಮತಗಟ್ಟೆಗೆ, ಬ್ಯಾಂಡ್ ಸಹಿತ ಎಲ್ಲರೂ ಜತೆಯಾಗಿ ತೆರಳಿದ್ದಾರೆ.