ಮುಂಬೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ 'ರಿಷಬ್ ಪಂತ್' : ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕ್ರಿಕೆಟರ್
ಮುಂಬೈ : ದೆಹಲಿಯಿಂದ ಜಾರ್ಖಾಂಡಿಗೆ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಭಾರತೀಯ ಕ್ರಿಕೆಟರ್ ರಿಷಬ್ ಪಂತ್ ನಿನ್ನೆ (ಜನವರಿ.06) ರಂದು ಮಧ್ಯಾಹ್ನ ಡಾ ಪರ್ದಿಲ್‌ವಾಲಾ ಮತ್ತು ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.
ಕ್ರಿಕೆಟರ್ ರಿಷಬ್ ಪಂತ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 3 ರಿಂದ 4 ದಿನಗಳ ಕಾಲ ಪಂತ್ ಅವರನ್ನು ನಿಗಾ ಇಡಲು ನಿರ್ಧರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಮೊಣಕಾಲಿನ ಅಸ್ಥಿರಜ್ಜು ಗಾಯಕ್ಕೆ ಆರಂಭಿಕ ಚಿಕಿತ್ಸೆಯ ನಂತರ ರಿಷಬ್ ಪಂತ್ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈಗೆ ಏರ್ ಲಿಫ್ಟ್ ಮಾಡಲಾಗಿತ್ತು. ಆಟಗಾರ ತನ್ನ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.