ಮಾಜಿ ಮ್ಯಾನೇಜರ್ ನಿಂದ ಕ್ರಿಕೆಟರ್ ಉಮೇಶ್ ಯಾದವ್ ಗೆ 44 ಲಕ್ಷ ವಂಚನೆ : ಪ್ರಕರಣ ದಾಖಲು
ನವದೆಹಲಿ : ಭಾರತೀಯ ವೇಗಿ ಉಮೇಶ್ ಯಾದವ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅವರ ಸ್ನೇಹಿತ ಮಹಾರಾಷ್ಟ್ರದ ನಾಗ್ಪುರದಲ್ಲಿ ಪ್ಲಾಟ್ ಕೊಡಿಸುವ ನೆಪದಲ್ಲಿ 44 ಲಕ್ಷ ವಂಚನೆ ಮಾಡಿರುವ ಬಗ್ಗೆ ವರದಿಯಾಗಿದೆ. ಈ ಬಗ್ಗೆ ಉಮೇಶ್ ಯಾದವ್ ಪ್ರಕರಣ ದಾಖಲಿಸಿದ್ದಾರೆ.
ಯಾದವ್ ನೀಡಿದ ದೂರಿನ ಮೇರೆಗೆ ಶೈಲೇಶ್ ಠಾಕ್ರೆ ವಿರುದ್ಧ ವಂಚನೆಗಾಗಿ ಪ್ರಕರಣ ದಾಖಲಾಗಿದ್ದು, ಇನ್ನೂ ಯಾವುದೇ ಬಂಧನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದವ್ ಅವರು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಾಗಿ ಆಯ್ಕೆಯಾದ ನಂತರ, ಜುಲೈ 15, 2014 ರಂದು ತಮ್ಮ ಸ್ನೇಹಿತ ಠಾಕ್ರೆ ಅವರನ್ನು ಮ್ಯಾನೇಜರ್ ಆಗಿ ನೇಮಿಸಿಕೊಂಡಿದ್ದರು. ಠಾಕ್ರೆ ಕಾಲ ಕ್ರಮೇಣ ಯಾದವರ ವಿಶ್ವಾಸ ಗಳಿಸಿದ್ದರು. ಈತ ಉಮೇಶ್ ಯಾದವ್ ಅವರ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದನು.
ಇತ್ತ ಉಮೇಶ್ ಅವರು ನಾಗ್ಪುರದಲ್ಲಿ ಭೂಮಿಯನ್ನು ಖರೀದಿಸಲು ಕುರಿತಂತೆ ಠಾಕ್ರೆ ಹತ್ತಿರ ಕೇಳಿದ್ದರು. ಇದಕ್ಕೆ ಠಾಕ್ರೆ ಬಂಜರು ಪ್ರದೇಶದಲ್ಲಿ ಪ್ಲಾಟ್ ಮಾಡಿರುವುದಾಗಿ ಅದರ ಖರೀದಿಗೆ ಯಾದವ್ ಅವರಿಂದ 44 ಲಕ್ಷ ರೂ.ಗಳನ್ನು ಪಡೆದಿದ್ದನು. ಬಳಿಕ ತನ್ನ ಹೆಸರಿನಲ್ಲಿಯೆ ಪ್ಲಾಟ್ ಖರೀದಿಸಿದ್ದಾನೆ.
ಇನ್ನು ಯಾದವ್ ವಂಚನೆಯ ಬಗ್ಗೆ ತಿಳಿದಾಗ ಠಾಕ್ರೆ ಬಳಿ ತಮ್ಮ ಹೆಸರಿಗೆ ಫ್ಲಾಟ್ ವರ್ಗಾಯಿಸುವಂತೆ ಕೇಳಿದ್ದಾರೆ. ಠಾಕ್ರೆ ಅದಕ್ಕೆ ನಿರಾಕರಿಸಿದ್ದಾನೆ. ಇನ್ನ ಹಣವನ್ನು ಹಿಂದಿರುಗಿಸಲು ಒಪ್ಪಿರಲಿಲ್ಲ. ಈ ಸಂಬಂಧ ಉಮೇಶ್ ಯಾದವ್ ಕೊರಾಡಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.