ಮಹಾ ಶಿವರಾತ್ರಿ ದಿನ ಈ ವಸ್ತುಗಳನ್ನು ತಂದರೆ ತೊಂದರೆಗಳು ಓಡಿ ಹೋಗುತ್ತವೆ

ಮಹಾ ಶಿವರಾತ್ರಿ ದಿನ ಈ ವಸ್ತುಗಳನ್ನು ತಂದರೆ ತೊಂದರೆಗಳು ಓಡಿ ಹೋಗುತ್ತವೆ

ಶಿವ ಆರಾಧನೆ ಮಾಡುವುದರಿಂದ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ. ಜೀವನದಲ್ಲಿ ಸಂತೋಷದ ಜೊತೆಗೆ ಆರ್ಥಿಕ ಸಮೃದ್ಧಿ ಬರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಶಿವರಾತ್ರಿ ಹಬ್ಬವು ಶಿವನ ಆರಾಧನೆಗೆ ಮೀಸಲಾಗಿದೆ. ಈ ದಿನ ವಿಶೇಷ ಕೆಲಸಗಳನ್ನು ಮಾಡಿದ್ರೆ ಬಹಳ ಒಳ್ಳೆಯದಾಗುತ್ತದೆ ಎನ್ನಲಾಗುತ್ತದೆ.

ಮಹಾ ಶಿವರಾತ್ರಿ ಆಚರಣೆಗೆ ದಿನಗಣನೆ ಆರಂಭವಾಗಿದೆ. ಶಿವರಾತ್ರಿಯ ದಿನ ಮನೆಗೆ ಕೆಲವೊಂದು ವಸ್ತುಗಳನ್ನು ಮನೆಗೆ ತಂದರೆ ಬಹಳ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇದೆ. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಭಗವಾನ್ ಶಿವನಿಗೆ ಕೆಲವು ವಸ್ತುಗಳೆಂದರೆ ತುಂಬಾ ಇಷ್ಟ. ಶಿವರಾತ್ರಿಯ ದಿನ ಆ ವಸ್ತುಗಳನ್ನು ಮನೆಗೆ ತಂದರೆ ಶಿವನ ಕೃಪೆ ಖಂಡಿತ ನಿಮ್ಮ ಮೇಲಿರುತ್ತದೆ. ಶಿವನ ಆಶೀರ್ವಾದದಿಂದ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ.

ಬೆಳ್ಳಿ ನಂದಿ

ನಂದಿಯು ಶಿವನ ವಾಹನ ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗೆಯೇ, ಪ್ರತಿಯೊಂದು ಶಿವ ದೇವಾಲಯದಲ್ಲಿ, ದೇವರ ಮುಂದೆ ಒಂದು ನಂದಿ ವಿಗ್ರಹ ಇದ್ದೇ ಇರುತ್ತದೆ. ನಂದಿ ಇಲ್ಲದೇ, ಎಲ್ಲಿಯೂ ಶಿವ ಇರುವುದಿಲ್ಲ. ಹಾಗಾಗಿ ಶಿವರಾತ್ರಿಯ ದಿನ ಮನೆಗೆ ಬೆಳ್ಳಿಯ ನಂದಿ ವಿಗ್ರಹ ತಂದರೆ ಮನೆಯಲ್ಲಿ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಗೆಯೇ, ಪೂಜೆಯ ನಂತರ ಹಣ ಇಟ್ಟ ಜಾಗದಲ್ಲಿ ಈ ನಂದಿಯನ್ನು ಇಡಬೇಕು.

ಏಕಮುಖ ರುದ್ರಾಕ್ಷಿ

ರುದ್ರಾಕ್ಷಿ ಎಂದರೆ ಶಿವನಿಗೆ ಬಹಳ ಇಷ್ಟ. ಇದನ್ನು ಶಿವನ ಮತ್ತೊಂದು ರೂಪ ಎನ್ನಲಾಗುತ್ತದೆ. ಹಾಗೆಯೇ ಇದನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಶಿವರಾತ್ರಿಯ ದಿನ ಒಂದು ಮುಖದ ರುದ್ರಾಕ್ಷಿಯನ್ನು ತಂದು, ಪೂಜೆ ಮಾಡಿ ಧರಿಸಬೇಕು.

ಶಿವಲಿಂಗ

ಶಿವಲಿಂಗಕ್ಕೆ ಜಲಾಭಿಷೇಕ ಮಾಡದಿದ್ದರೆ ಫಲಗಳು ಸಿಗುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಗ್ರಹದೋಷ ಇದ್ದರೆ ತಪ್ಪದೇ ಶಿವಲಿಂಗಕ್ಕೆ ಅಭಿಷೇಕ ಮಾಡಲೇಬೇಕು. ಹಾಗಾಗಿ ನಿವು ಮನೆಗೆ ರತ್ನಗಳಿಂದ ಮಾಡಿದ ಶಿವಲಿಂಗವನ್ನು ಮನೆಗೆ ತಂದು ಅಭಿಷೇಕ ಮಾಡಿದರೆ ಉತ್ತಮ.

ತಾಮ್ರದ ಕಲಶ

ಮಹಾಶಿವರಾತ್ರಿಯ ದಿನ ತಾಮ್ರದ ಕಲಶದಿಂದ ಶಿವನಿಗೆ ಅಭಿಷೇಕ ಮಾಡಬೇಕು. ಅಲ್ಲದೇ, ಶಿವರಾತ್ರಿಯ ದಿನ ತಾಮ್ರದ ಕಲಶ ತಂದರೆ ಮನೆಯಲ್ಲಿ ನಡೆಯುವ ಜಗಳ ಹಾಗೂ ಕಿರಿಕಿರಿಗೆ ಪರಿಹಾರ ಸಿಗುತ್ತದೆ. ಜೊತೆಗೆ ಆರ್ಥಿಕ ಸಮಸ್ಯೆಗೆ ಸಹ ಪರಿಹಾರ ಸಿಗುತ್ತದೆ.

ಮೃತ್ಯುಂಜಯ ಯಂತ್ರ

ಮೃತ್ಯುಂಜಯ ಯಂತ್ರದ ಮಹಿಮೆಯ ಬಗ್ಗೆ ನಾವು ಹೆಚ್ಚಾಗಿ ಹೇಳಬೇಕಿಲ್ಲ. ಈ ಯಂತ್ರ ಮನೆಯಲ್ಲಿ ಇದ್ದರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕಾಡುವುದಿಲ್ಲ ಎನ್ನುವ ನಂಬಿಕೆ ಇದೆ. ಹಾಗಾಗಿ ಶಿವರಾತ್ರಿಯ ದಿನ ಈ ಯಂತ್ರವನ್ನು ಮನೆಗೆ ತನ್ನಿ.