ಭಾರತದ 41 ಕೋಟಿ ಜನ ಬಡತನದಿಂದ ಮುಕ್ತ : ವಿಶ್ವಸಂಸ್ಥೆ

ಕಳೆದ 15 ವರ್ಷದಲ್ಲಿ ಭಾರತದ 41.5 ಕೋಟಿ ಜನ ಬಡತನದಿಂದ ಹೊರಬಂದಿದ್ದು, ಇದು ಐತಿಹಾಸಿಕ ಬದಲಾವಣೆ ಎಂದು ವಿಶ್ವಸಂಸ್ಥೆ ವಿಶ್ಲೇಷಿಸಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಯೋಜನೆ(ಯುಎನ್‍ಡಿಪಿ), ಆಕ್ಸ್‍ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(ಒಪಿಎಚ್‍ಐ) ಸಂಸ್ಥೆಗಳು ಆಕ್ಸ್‍ಫರ್ಡ್ ಯೂನಿವರ್ಸಿಟಿ ಸಂಯುಕ್ತಾಶ್ರಯದಲ್ಲಿ ಸಿದ್ದಗೊಳಿಸಿರುವ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ) ವರದಿಯನ್ನು ಇಂದು ಬಿಡುಗಡೆ ಮಾಡಿದೆ.
ಇದರ ಪ್ರಕಾರ 2005-06 ಮತ್ತು 2019/21ರ ನಡುವೆ 415 ಮಿಲಿಯನ್(41.5 ಕೋಟಿ) ಜನ ಬಡತನದಿಂದ ಮುಕ್ತರಾಗಿದ್ದಾರೆ. ಈ ಪ್ರಾತ್ಯಕ್ಷಿಕೆ ಸುಸ್ಥಿರ ಅಭಿವೃದ್ಧಿಯ 1.2 ಪ್ರಮಾಣದ ಗುರಿಯನ್ನು ತಲುಪಲು ಅರ್ಧದಷ್ಟು ಸಹಾಯವಾಗಲಿದೆ.
ಪುರುಷರ, ಮಹಿಳೆಯರು ಮತ್ತು ಮಕ್ಕಳು ಸೇರಿ ಎಲ್ಲ ವಯೋಮಾನದ ಬಡವರು 2030ರ ವೇಳೆಗೆ ಸುಸ್ಥಿರತೆಯ ಮಾನದಂಡವನ್ನು ತಲುಪಲು ಸಾಧ್ಯವಾಗಲಿದೆ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.
ಸುಸ್ಥಿರ ಅಭಿವೃದ್ಧಿಯ ಗುರಿಯಲ್ಲಿ ಭಾರತದ ಅಧ್ಯಯನ ಬಹಳ ಮುಖ್ಯವಾಗಿತ್ತು. ಎಲ್ಲ ಮಾದರಿಯ ಬಡತನವನ್ನು ಕನಿಷ್ಟ ಪ್ರಮಾಣದ ಅರ್ಧದಷ್ಟು ಕಡಿತ ಮಾಡುವಲ್ಲಿ ಭಾರತ ಮೊದಲನೆಯದಾಗಿದೆ ಎಂದು ವಿಶ್ವಸಂಸ್ಥೆಯ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.
2020ರ ಜನಸಂಖ್ಯೆ ದತ್ತಾಂಶ ಆಧರಿಸಿ ವರದಿ ತಯಾರಾಗಿದೆ. ವಿಶ್ವಾದ್ಯಂತ 22.89 ಕೋಟಿ ಜನ ಬಡವರು ಉಳಿದಿದ್ದಾರೆ. ಅದರಲ್ಲಿ ನೈಜೀರಿಯಾದ 9.67 ಕೋಟಿ ಜನ ಸೇರಿದ್ದಾರೆ. ಆದಾಗ್ಯೂ ಭಾರತದ ಜನಸಂಖ್ಯೆಯ ದುರ್ಬಲ ವರ್ಗದ ಅಭಿವೃದ್ಧಿ ವಿಷಯದಲ್ಲಿ ಕೆಲ ತೊಡಕುಗಳನ್ನು ಉಲ್ಲೇಖಿಸಲಾಗಿದೆ.
ಇಂಧನದ ದರ ಕೋವಿಡ್ ಪರಿಣಾಮ, ಬಡತನದ ಮೇಲೆ ಪ್ರಭಾವ ಬೀರಿದೆ. ರಾಜ್ಯ ಸರ್ಕಾರ ಪೋಷಕಾಂಶ ಮತ್ತು ಇಂಧನ ಬೆಲೆ ಸ್ಥಿರತೆಯ ಬಗ್ಗೆ ತೆಗೆದುಕೊಂಡ ಸಮಗ್ರ ನೀತಿಗಳು ಕೆಲಸ ಮಾಡಿವೆ ಎಂದು ಹೇಳಲಾಗಿದೆ.
ಭಾರತದ 9.7 ಕೋಟಿ ಮಕ್ಕಳು 2019/21ನೇ ಸಾಲಿಗೆ ಬಡತನದಲ್ಲೇ ಉಳಿದಿದ್ದಾರೆ. ಒಟ್ಟು ಬಡವರ ಸಂಖ್ಯೆಯಲ್ಲಿ ಮಕ್ಕಳು ಮತ್ತು ವಯಸ್ಕರ ಸಂಖ್ಯೆ ಮಿಶ್ರಣವಾಗಿದೆ. ಜಗತ್ತಿನ ಇತರ ದೇಶಗಳಲ್ಲಿ ಬಡತನ ನಿವಾರಣೆ ಯೋಜನೆಗಳು ಪರಿಣಾಮಕಾರಿಯಾಗಿ ನಡೆಯುತ್ತಿದೆ. ಭಾರತದಲ್ಲಿ ಮಕ್ಕಳು ಮತ್ತು ಕೆಳವರ್ಗಗಳು ಮತ್ತು ಗ್ರಾಮೀಣ ಭಾಗದಲ್ಲಿ ಬಡತನ ಹೆಚ್ಚಾಗಿದೆ.
ಕೋವಿಡ್ ಸಂದರ್ಭದಲ್ಲಿ ದತ್ತಾಂಶಗಳ ಸಂಗ್ರಹ ಸಮರ್ಪಕವಾಗದ ಹಿನ್ನೆಲೆಯಲ್ಲಿ ಈ ವೇಳೆಯ ಬಡತನ ನಿವಾರಣಾ ಯೋಜನೆಗಳ ಬಗ್ಗೆ ಅಸ್ಪಷ್ಟ ಮಾಹಿತಿ ಇದೆ ಎಂದು ಹೇಳಲಾಗಿದೆ. ಸರ್ಕಾರಿ ಕಾರ್ಯಕ್ರಮಗಳ ಹೊರತಾಗಿಯೂ ಕೂಡ ಭಾರತದಲ್ಲಿ 15 ವರ್ಷದೊಳಗಿನ ಮಕ್ಕಳ ಬಡತನ ಶೇ.21.8ರಷ್ಟಿದೆ. 9.7 ಕೋಟಿ ಮಕ್ಕಳು ಸಂಕಷ್ಟದಲ್ಲಿದ್ದಾರೆ.
ಜಾಗತಿಕವಾಗಿ 111 ದೇಶಗಳ 100 ಕೋಟಿ 20 ಲಕ್ಷ ಜನ ಕರಾರುವಕ್ಕಾದ ಬಹು ಆಯಾಮ ಬಡತನದಲ್ಲಿ ಬಳಲುತ್ತಿದ್ದಾರೆ. ಅವರಲ್ಲಿ 593 ಮಂದಿ 18 ವರ್ಷದೊಳಗಿನವರಾಗಿದ್ದಾರೆ. ಜಾಗತಿಕ ಬಡತನದ ಪ್ರಮಾಣ ಶೇ.19.1ರಷ್ಟಿದೆ. 111 ಅಭಿವೃದ್ಧಿಶೀಲ ದೇಶಗಳ ದತ್ತಾಂಶಗಳ ವಿಶ್ಲೇಷಣೆ ಕೂಡ ನಡೆದಿದೆ. ಅಲ್ಲಿಯೂ ಶೇ.3.9ರಷ್ಟು ಬಡತನಕ್ಕೆ ಸಿಲುಕಿದ್ದಾರೆ.
ಪೌಷ್ಟಿಕಾಂಶ, ಅಡುಗೆ ಇಂಧನ, ಶೌಚಾಲಯ ಮತ್ತು ವಸತಿಯ ಮೂಲಭೂತ ಸಮಸ್ಯೆಗಳನ್ನು ಈ ಜನ ಅನುಭವಿಸುತ್ತಿದ್ದಾರೆ. ಭಾರತದಲ್ಲಿ 4.55 ಕೋಟಿ ಜನ ಬಡವರಿದ್ದು, ಅವರಲ್ಲಿ 3.44 ಕೋಟಿ ಜನರ ಈ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ವರದಿ ವಿಶ್ಲೇಷಿಸಿದೆ.
ಬಾಂಗ್ಲಾದೇಶದಲ್ಲಿ 2.1 ಕೋಟಿ,ಪಾಕಿಸ್ತಾನದಲ್ಲಿ 1.9 ಕೋಟಿ ಜನ ದಕ್ಷಿಣ ಏಷ್ಯಾದ ದೇಶಗಳಲ್ಲಿ ಬಡತನ ಅನುಭವಿಸುತ್ತಿದ್ದಾರೆ. ಬಡತನದಿಂದ ಹೊರಬಂದ 41.5 ಕೋಟಿ ಜನರ ಪೈಕಿ 277.5 ಕೋಟಿ ಜನ 2005ರಿಂದ 2016ರ ನಡುವೆ ಸುಧಾರಿತ ಜೀವನ ಪಡೆದಿದ್ದಾರೆ.
2016ರಿಂದ 21ರ ನಡುವೆ 14 ಕೋಟಿ ಜನ ಬಡತನದಿಂದ ಹೊರಬಂದಿರುವುದಾಗಿ ದತ್ತಾಂಶಗಳು ತಿಳಿಸಿವೆ. ಬಡತನದ ಒಟ್ಟು ಶೇ.42 ಪ್ರಮಾಣದಲ್ಲಿ ಭಾರತ ಶೇ.16.4ಷ್ಟು ಪಾಲು ಹೊಂದಿದೆ.
ಬಿಹಾರ ರಾಜ್ಯ ಬಡತನದಲ್ಲಿ ಮುಂಚೂಣಿಯಲ್ಲಿದೆ. ಉಳಿದಂತೆ ಜಾರ್ಖಂಡ್, ಮೇಘಾಲಯ, ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ, ಒಡಿಶಾ, ರಾಜಸ್ಥಾನ ಸೇರಿ 10ಕ್ಕೂ ಹೆಚ್ಚು ರಾಜ್ಯಗಳು ತೀವ್ರ ಬಡತನದ ಸೂಚ್ಯಂಕದಲ್ಲಿದೆ.