'ಬೊಮ್ಮಾಯಿ ಸುಳ್ಳಿನ ಕಂತೆಯ ಬಜೆಟ್ ಮಂಡಿಸಿದ್ದಾರೆ' : ಸುರ್ಜೆವಾಲಾ ವಾಗ್ಧಾಳಿ

ಬೆಂಗಳೂರು : ಇದೊಂದು ಸುಳ್ಳಿನ ಬಜೆಟ್ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ.
ಇದು ಸುಳ್ಳಿನಿಂದ ಕೂಡಿದ ಕಿವಿ ಮೇಲೆ ಹೂ ಇಡುವ ಬಜೆಟ್ ಆಗಿದೆ. ಬೊಮ್ಮಾಯಿ ಸುಳ್ಳಿನ ಕಂತೆಯ ಬಜೆಟ್ ಮಂಡಿಸಿದ್ದಾರೆ ಎಂದು ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ.
ಇನ್ನೂ, ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಎಂದು ಹೇಳಬಹುದು ಬಜೆಟ್ ಗಾತ್ರ 3ಲಕ್ಷ 9 ಸಾವಿರ 189 ಕೋಟಿ ರೂ ಬಜೆಟ್ ಆಗಿದೆ. ಕಳೆದ ಬಜೆಟ್ನಲ್ಲಿ206 ಹೊಸ ಘೋಷಣೆ ಮಾಡಿದ್ರು ಇಡೇರಿಲ್ಲ, ಇರುವ ಘೋಷಿಸಿದ 56 ಯೋಜನೆಗಳೇ ಅನುಷ್ಠಾನಕ್ಕೆ ಬಂದಿಲ್ಲ.ರಾಜ್ಯದ ಜನರ ಕಿವಿಗೆ ಹೂ ಇಡುವ ಬಜೆಟ್ ಇದಾಗಿದೆ. ಸರ್ವಜ್ಞನ ವಚನ ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.