ಬೇಸಿಗೆಯ ಆರಂಭದಲ್ಲೇ ಬೆಳಗಾವಿಯಲ್ಲಿ ನೀರಿನ ಅಭಾವ : ಕೊಡ ಹಿಡಿದು ಜನರ ಪರದಾಟ

ಬೇಸಿಗೆಯ ಆರಂಭದಲ್ಲೇ ಬೆಳಗಾವಿಯಲ್ಲಿ ನೀರಿನ ಅಭಾವ : ಕೊಡ ಹಿಡಿದು ಜನರ ಪರದಾಟ

ಬೆಳಗಾವಿ : ಬೇಸಿಗೆ ಶುರುವಾಗುತ್ತಿದ್ಧಂತೆ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ನೀರಿನ ಅಭಾವ ಹೆಚ್ಚಾಗಿದ್ದು, ಕುಡಿಯೋ ನೀರಿಗಾಗಿ ಪರದಾಟ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯಾಗಿದೆ.

ನಗರದಲ್ಲಿ ನೀರು ಪೂರೈಕೆ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷಗಳಾದ ಪೈಪ್‌ಲೈನ್‌ಗಳು ಸೋರಿಕೆ, ಕೆಲ ಸಮಸ್ಯೆಗಳಿಂದ ಪ್ರತಿ ದಿನ ಒಂದಲ್ಲಒಂದು ಬಡಾವಣೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಕೊಡ ಹಿಡಿದು ನೀರಿಗಾಗಿ ಅಲೆದಾಡುವ ದೃಶ್ಯ ಕಂಡುಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 15 ದಿನಗಳಿಂ ಕಣಬರ್ಗಿ, ಹಿಂಡಾಲ್ಕೋ, ಸೈನಿಕ್‌ ನಗರ, ಬಿಮ್ಸ್‌, ಕೆಎಲ್‌ಇ, ಮಜಗಾಂವ, ನಾನಾವಾಡಿ ಸೇರಿದಂತೆ ನಗರದ ಬಹುತೇಕ ಬಡಾವಣೆಗಳಲ್ಲೂ ನೀರು ಸರಬರಾಜು ವ್ಯತ್ಯಯಗೊಂಡಿದ್ದಾರೆ.

ಕಳೆದ 3-4 ವರ್ಷಗಳಿಂದ ಹೆಚ್ಚು ಮಳೆಯಾಗುತ್ತಿದ್ದು, ಬೆಳಗಾವಿ ನಗರಕ್ಕೆ ನೀರು ಪೂರೈಸುವ ಹಿಡಕಲ್‌ ಮತ್ತು ರಾಕಸಕೊಪ್ಪ ಜಲಾಶಯಗಳು ಭರ್ತಿಯಾಗಿವೆ. ಹಿತ ಮಿತವಾಗಿ ಬಳಸಿದರೆ ಸದ್ಯ ಬೇಸಿಗೆಯ ಅಂತ್ಯದವರೆಗೂ ನಗರಕ್ಕೆ ನೀರು ಸಾಕುತ್ತದೆ ಎಂದು ಈ ಹಿಂದೆಯೇ ಅಧಿಕಾರಿಗಳು ಸೂಚನೆ ನೀಡಿದ್ದರು ಎಂಬ ತಿಳಿದುಬಂದಿದೆ.