ಬೆಂಗಳೂರಿನಲ್ಲಿ ಸೀಮಂತ ಕಾರ್ಯಕ್ರಮದ ವೇಳೆ ಮಾರಾಮಾರಿ ಕೇಸ್: ಮೊದಲ ಪತ್ನಿ ಹೇಳಿದ್ದೇನು ಗೊತ್ತಾ?
ಬೆಂಗಳೂರು: ನಗರದಲ್ಲಿ ಸೀಮಂತ ಕಾರ್ಯಕ್ರಮವ ವೇಳೆಯಲ್ಲಿ ಮಾರಮಾರಿಯಾಗಿ, ಗಲಾಟೆ ನಡೆದಿದ್ದು. ಈ ಘಟನೆಯ ನಂತ್ರ ತೇಜಸ್ ಮೊದಲ ಪತ್ನಿ ಎಂಬುದಾಗಿ ಹೇಳಿಕೊಂಡು ಚೈತ್ರ ಎಂಬುವರು ಸುದ್ದಿಗೋಷ್ಠಿ ನಡೆಸಿದರು. ಅವರು ಏನು ಹೇಳಇದ್ದಾರೆ ಅಂತ ಮುಂದೆ ಓದಿ.
ಇಂದು ಸೀಮಂತ ಕಾರ್ಯಕ್ರಮದಲ್ಲಿ ಮಾರಾಮಾರಿ ಕೇಸ್ ಸಂಬಂಧ ಸುದ್ದಿಗೋಷ್ಠಿ ನಡೆಸಿದಂತ ತೇಜಸ್ ಮೊದಲ ಪತ್ನಿ ಎಂಬುವುದಾಗಿ ಹೇಳಿಕೊಂಡ ಚೈತ್ರಾ ಎಂಬುವರು, ತೇಜಸ್ ಹಾಗೂ ನನ್ನ ನಡುವೆ 2018ರಲ್ಲಿ ಮದುವೆಯಾಗಿತ್ತು ಎಂಬುದಾಗಿ ತಿಳಿಸಿದ್ದಾರೆ.
ನಾನು ಇಂದು ಸೀಮಂತ ನಡೆಯುತ್ತಿದ್ದ ವೇಳೆಯಲ್ಲಿ ಪೋಟೋ ತೆಗೆದುಕೊಳ್ಳೋದಕ್ಕೆ ಹೋದಾಗ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ತೇಜಸ್ ನಿಂದ 4-5 ಹೆಣ್ಣುಮಕ್ಕಳ ಜೀವನ ಹಾಳಾಗಿದೆ ಎಂಬುದಾಗಿ ಹೇಳಿದರು.
ತೇಜಸ್ ಕುಟುಂಬದವರು ನಮ್ಮ ಇಡೀ ಕುಟುಂಬ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ನನಗೆ ಅನ್ಯಾಯ ಮಾಡಿದ್ದಾರೆ. ನ್ಯಾಯಬೇಕಿದೆ ಎಂಬುದಾಗಿ ಕಣ್ಣೀರಿಟ್ಟರು.
ಹುಡುಗಿ ಜೊತೆಗಿದ್ದ ಪೋಟೋ ನನಗೆ ಸಿಕ್ಕಿತ್ತು. ಅದನ್ನು ತೋರಿಸಿ ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ನಾನು 2018ರಲ್ಲಿ ಮದುವೆಯಾದಂತ ಮೊದಲ ಪತ್ನಿಯಾಗಿದ್ದೇನೆ. ನನ್ನ ಬಳಿಕ ಹಣ, ಆಸ್ತಿ ಇದೆ ಅಂತ ದರ್ಪದಲ್ಲಿ ಮೇಘನಾ ಯಾದವ್ ಜೊತೆಗೆ 2ನೇ ಮದುವೆ ಆಗಿರೋದಾಗಿ ಹೇಳಿದ್ದರು. ಈ ಬಳಿಕ ಲೇಖನಾ ಎಂಬುವರನ್ನು ಮೂರನೇ ಮದುವೆಯಾಗಿದ್ದರು ಎಂದು ತಿಳಿಸಿದರು.
ಲೇಖನಾ ಸೀಮಂತ ಕಾರ್ಯಕ್ರಮದಲ್ಲಿ ಅವರ ಪೋಟೋ ತೆಗೆದುಕೊಳ್ಳೋದಕ್ಕೆ ಹೋಗಿದ್ದೆ. ಈ ವೇಳೆಯಲ್ಲಿ ನನಗೆ ಪೋಟೋ ತೆಗೆಯೋದಕ್ಕೆ ಬಿಡದೇ ಗಲಾಟೆ ಮಾಡಿದರು. ನನ್ನ ಮೇಲೆ ಹಲ್ಲೆ ಕೂಡ ನಡೆಸಿರೋದಾಗಿ ಆರೋಪಿಸಿದರು.