ಬೆಂಗಳೂರಿನಲ್ಲಿ ಮತ್ತೆ ರಸ್ತೆಗಿಳಿಯಲಿದೆ ಡಬಲ್ ಡೆಕ್ಕರ್ ಬಸ್

ಡಬಲ್ ಡೆಕ್ಕರ್ ಬಸ್ ಗಳು ಶೀಘ್ರದಲ್ಲೇ ಮತ್ತೆ ಬೆಂಗಳೂರಿನಲ್ಲಿ ಸಂಚಾರ ಆರಂಭಿಸಲಿವೆ. 1997ರಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಸಾರಿಗೆ ಸಂಸ್ಥೆ ಡಬಲ್ ಡೆಕ್ಕರ್ ಬಸ್ ಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿತ್ತು. ಇದೀಗ ಈ ಬಸ್ ಗಳನ್ನು ರಸ್ತೆಗಿಳಿಸಲು ಸಿದ್ದತೆ ನಡೆಸಿದೆ. ನವೆಂಬರ್ ನಲ್ಲಿ ಪ್ರಕಟಣೆ ಹೊರಡಿಸಿದ್ದ ಬಿಎಂಟಿಸಿ, ಡಬಲ್ ಡೆಕ್ಕರ್ ಬಸ್ ಖರೀದಿಗೆ ಆಸಕ್ತಿ ವ್ಯಕ್ತಪಡಿಸಿತ್ತು. ಐದು ಎಲೆಕ್ಟ್ರಿಕ್ ಎಸಿ ಡಬಲ್ ಡೆಕ್ಕರ್ ಬಸ್ಗಳಿಗೆ ಶೀಘ್ರ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.