'ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಇದಾಗಿದೆ' : ಸುದ್ದಿಗೋಷ್ಟಿ ನಡೆಸಿ, ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ನೇತೃತ್ವದ ಸರ್ಕಾರ ಇಂದು 2023-24ನೇ ಸಾಲಿನ ಬಜೆಟ್ ಮಂಡಿಸಲಾಗಿದೆ, ಈ ಬಾರಿಯ ಬಜೆಟ್ ಕುರಿತು ಕಿವಿಗೆ ಹೂ ಇಟ್ಟುಕೊಂಡೇ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿ ನಡೆಸಿದ್ದಾರೆ.
ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಎಂದು ಹೇಳಬಹುದು ಬಜೆಟ್ ಗಾತ್ರ 3ಲಕ್ಷ 9 ಸಾವಿರ 189 ಕೋಟಿ ರೂ ಬಜೆಟ್ ಆಗಿದೆ. ಕಳೆದ ಬಜೆಟ್‌ನಲ್ಲಿ206 ಹೊಸ ಘೋಷಣೆ ಮಾಡಿದ್ರು ಇಡೇರಿಲ್ಲ, ಇರುವ ಘೋಷಿಸಿದ 56 ಯೋಜನೆಗಳೇ ಅನುಷ್ಠಾನಕ್ಕೆ ಬಂದಿಲ್ಲ.ರಾಜ್ಯದ ಜನರ ಕಿವಿಗೆ ಹೂ ಇಡುವ ಬಜೆಟ್ ಇದಾಗಿದೆ. ಸರ್ವಜ್ಞನ ವಚನ ಹೇಳುವ ಮೂಲಕ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.