ಬಿಜೆಪಿ ಅಭ್ಯರ್ಥಿಯ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಗುಜರಾತ್ ವಿಧಾನಸಭೆ ಮೊದಲ ಹಂತದ ಚುನಾವಣೆಯ ಮತದಾನ ಇಂದು ಬೆಳಗ್ಗೆಯಿಂದ ಪ್ರಾರಂಭವಾಗಿದ್ದು, ಈ ಮಧ್ಯೆ ವನ್ಸ್ಡಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಯುಷ್ ಪಟೇಲ್ ಮೇಲೆ ಅಪರಿಚಿತರು ಹಲ್ಲೆ ನಡೆಸಿದ್ದು ವರದಿಯಾಗಿದೆ. ಪಿಯುಷ್ ಪಟೇಲ್ ಅವರು ಇಂದು ವನ್ಸ್ಡಾದ ಝಾರಿ ಗ್ರಾಮದಲ್ಲಿ ಇದ್ದಾಗ, ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಕಾರನ್ನು ಧ್ವಂಸ ಗೊಳಿಸಿದ್ದಾರೆ. ಪಟೇಲ್ ಮೇಲೆ ದಾಳಿ ನಡೆಸಿದವರು ಕಾಂಗ್ರೆಸ್ ಅಭ್ಯರ್ಥಿ ಅನಂತ್ ಪಟೇಲ್ ಅವರ ಬೆಂಬಲಿಗರು ಎಂದು ಬಿಜೆಪಿ ಆರೋಪ ಮಾಡಿದೆ.