ಬಳ್ಳಾರಿ ನೂತನ ಎಸ್ಪಿಯಾಗಿ ಕಾರ್ಯಭಾರವಹಿಸಿಕೊಂಡ ರಂಜಿತ್ ಕುಮಾರ್ ಬಂಡಾರು
ಬಳ್ಳಾರಿ: ಜಿಲ್ಲೆಯ ನೂತನ ಎಸ್ಪಿಯಾಗಿ ರಂಜಿತ್ ಕುಮಾರ್ ಬಂಡಾರು ನಿನ್ನೆ ಕಾರ್ಯಭಾರವಹಿಸಿಕೊಂಡಿದ್ದಾರೆ.
ಈ ಹಿಂದಿನ ಎಸ್ಪಿ ಸೈದುಲ ಅಡಾವತ್ ನೂತನ ಎಸ್ಪಿಗೆ ಪೊಲೀಸ್ ದಂಡ ನೀಡುವ ಮೂಲಕ ಕಾರ್ಯಭಾರವಹಿಸಿಕೊಟ್ಟರು.
2017 ರ ಐಪಿಎಸ್ ಬ್ಯಾಚಿನ ಬಂಡಾರು ಅವರು ಈ ಮೊದಲು ಬೆಂಗಳೂರಿನಲ್ಲಿ ಆಂತರಿಕ ಭದ್ರತಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಸೈದುಲ ಅವರು ಕಳೆದ 2019 ಸೆಪ್ಟೆಂಬರ್ ನಲ್ಲಿ ಬಳ್ಳಾರಿಗೆ ಬಂದಿದ್ದರು. ಎರೆಡು ವರ್ಷ ಒಂದು ತಿಂಗಳಲ್ಲಿ ಸರ್ಕಾರ ಅವರನ್ನು ವರ್ಗಾವಣೆ ಮಾಡಿದೆ.
ಇವರಿಗಿಂತಲೂ ಈ ಹಿಂದಿನ ಎಸ್ಪಿ ಆರ.ಚೇತನ್ ಅವರ ಕರ್ತವ್ಯಕ್ಕೆ ಹೋಲಿಸಿಕೊಂಡರೆ ಇವರು ತಮ್ಮ ಆಡಳಿತ ಅವಧಿಯಲ್ಲಿ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಲಿಲ್ಲ.
ಇಲಾಖೆಯ ಕೆಳ ಹಂತದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಿಡಿತದಲ್ಲಿ ಇದ್ದಂತೆ ಕಾಣಲಿಲ್ಲ.
ಅವರಿಂದ ಏನಾದರೂ ತಪ್ಪುಗಳು ಆಗಿದ್ದು ಸಾಕ್ಷಿ ಸಮೇತ ನೀಡಿದಲ್ಲಿ ಮಾತ್ರ ತಕ್ಷಣ ಕ್ರಮ ತೆಗೆದುಕೊಳ್ಳುತ್ತಿದ್ದರು.