ಪ್ರಜಾಧ್ವನಿ' ಯಾತ್ರೆಯ 'ರೋಡ್ ಶೋ' ವೇಳೆ ಕಂತೆ ಕಂತೆ ಹಣ ಎಸೆದ ಡಿ.ಕೆ.ಶಿವಕುಮಾರ್..
ಮಂಡ್ಯ: ಪ್ರಜಾಧ್ವನಿ ಯಾತ್ರೆಯ ರೋಡ್ ಶೋ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಂತೆ ಕಂತೆ ಹಣ ಎಸೆದಿದ್ದಾರೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಚುನಾವಣೆ ಹೊತ್ತಲ್ಲಿ ಕಲಾವಿದರಿಗೆ ಹಣವನ್ನು ಎಸೆಯುವ ಮೂಲಕ ಡಿ.ಕೆ.ಶಿವಕುಮಾರ್ ಎಡವಟ್ಟು ಮಾಡಿಕೊಂಡಿದ್ದು, ಭಾರೀ ಟೀಕೆಗೆ ಕಾರಣವಾಗಿದೆ.
ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮದಲ್ಲಿ ಇಂದು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇನ್ನು ಅಲ್ಲಿನ ಅಭ್ಯರ್ಥಿ ರಮೇಶ್ ಬಂಡಿಸಿದ್ದೇಗೌಡ ಪರವಾಗಿ ಬೇವಿನಹಳ್ಳಿಯಲ್ಲಿ ಬಸ್ ಮೇಲಿಂದಲೇ ರೋಡ್ ಶೋ ಮೂಲಕ ಭರ್ಜರಿ ಚುನಾವಣಾ ಪ್ರಚಾರ ಮಾಡುತ್ತಿದ್ದರು. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಂತೆ ಕಂತೆ ಹಣ ಎಸೆದಿದ್ದಾರೆ ಎನ್ನಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. 500 ರೂ. ಮುಖಬೆಲೆಯ ನೋಟುಗಳನ್ನು ಡಿಕೆಶಿ ಎಸೆದಿದ್ದಾರೆ. ಬಸ್ ಮೇಲಿಂದಲೇ ಜಾನಪದ ಕಲಾವಿದರ ಮೇಲೆ ನೋಟುಗಳನ್ನು ಎಸೆದು ಡಿಕೆಶಿ ಮುಂದೆ ಸಾಗಿದ್ದಾರೆ.ಯಾತ್ರೆ ವೇಳೆ ಪ್ರಯುಕ್ತ ಡಿಕೆಶಿಗೆ ಸ್ವಾಗತ ಕೋರಲು ಬಂದಿದ್ದ ಜಾನಪದ ಕಲಾವಿದರ ಮೇಲೆ ಡಿಕೆಶಿ ಹಣ ಎಸೆದಿದ್ದಾರೆ ನೋಟುಗಳಿಗೆ ಜನರು ಮತ್ತು ಕಲಾವಿದರು ಮುಗಿಬಿದ್ದಿದ್ದರು ಎನ್ನಲಾಗಿದೆ.
ವಿಜಯನಗರದ ಹೊಸಪೇಟೆಯಲ್ಲಿ ಭೂಕಂಪನ
ವಿಜಯನಗರ: ಜಿಲ್ಲೆಯ ಹೊಸಪೇಟೆಯಲ್ಲಿ ಇಂದು ಭೂಮಿ ಕಂಪಿಸಿದಂತ ಅನುಭವ ಉಂಟಾಗಿದೆ. ಭೂಕಂಪನದ ಅನುಭವದಿಂದಾಗಿ ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಹೊರಗೆ ಆತಂಕದಲ್ಲಿ ಕಾಲ ಕಳೆದಂತ ಘಟನೆ ನಡೆದಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರವು, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಡಣಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಯ್ಯನಹಳ್ಳಿಯಲ್ಲಿ ಇಂದು ಭೂಕಂಪನವಾಗಿದೆ. ಅಯ್ಯನಹಳ್ಳಿಯ 15 ರಿಂದ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಕಂಪನ ಉಂಟಾದಂತೆ ವರದಿಯಾಗಿರೋದಾಗಿ ಹೇಳಿದೆ.ಇಂದು ನಡೆದಂತ ಭೂಕಂಪನದ ತೀವ್ರತೆ ಅಷ್ಟೇನು ಇಲ್ಲದ ಕಾರಣ ಕಂಪನದ ಅನುಭವ ಜನರಲ್ಲಿ ಉಂಟಾಗಿದೆ. ಭೂಮಿ ಸಣ್ಣ ಪ್ರಮಾಣದಲ್ಲಿ ಕಂಪಿಸಿದಂತೆ ಆಗಿದ್ದು, ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಆತಂಕದಲ್ಲಿ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.