ಪಾಕ್‌ ಮಾಜಿ ಪ್ರಧಾನಿ ʻಇಮ್ರಾನ್ ಖಾನ್ʼ ಪ್ರತಿಭಟನಾ ರ‍್ಯಾಲಿಯ ಟ್ರಕ್‌ಗೆ ಸಿಲುಕಿ ಪತ್ರಕರ್ತೆ ಸಾವು

ಪಾಕ್‌ ಮಾಜಿ ಪ್ರಧಾನಿ ʻಇಮ್ರಾನ್ ಖಾನ್ʼ ಪ್ರತಿಭಟನಾ ರ‍್ಯಾಲಿಯ ಟ್ರಕ್‌ಗೆ ಸಿಲುಕಿ ಪತ್ರಕರ್ತೆ ಸಾವು

ಸ್ಲಾಮಾಬಾದ್: ಪಾಕ್‌ ಮಾಜಿ ಪ್ರಧಾನಿ ʻಇಮ್ರಾನ್ ಖಾನ್ʼ ಅವರ ನೇತೃತ್ವದಲ್ಲಿ ಭಾನುವಾರ ನಡೆಯುತ್ತಿದ್ದ ಪ್ರತಿಭಟನಾ ರ‍್ಯಾಲಿ ವೇಳೆ ಸುದ್ದಿ ಪ್ರಸಾರ ಮಾಡುತ್ತಿದ್ದ ಪತ್ರಕರ್ತೆಯೊಬ್ಬಳು ಟ್ರಕ್‌ನ ಅಡಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಇನ್ನೂ, ಪತ್ರಕರ್ತೆ ಟ್ರಕ್ ಅಡಿಗೆ ಸಿಲುಕುತ್ತಿದ್ದಂತೆ ರ‍್ಯಾಲಿಯನ್ನು ನಿಲ್ಲಿಸಲಾಗಿದೆ. ಮೃತ ಪತ್ರಕರ್ತೆಯನ್ನು ಸ್ಥಳೀಯ ಸುದ್ದಿ ಚಾನೆಲ್ ಫೈವ್‌ನ ವರದಿಗಾರ್ತಿ ಸದಾಫ್ ನಯೀಮ್ ಎಂದು ಗುರುತಿಸಲಾಗಿದೆ.

ವರದಿಯ ಪ್ರಕಾರ, ಖಾನ್‌ ಅವರ ರ‍್ಯಾಲಿ ಸಾಧೋಕೆ ಬಳಿ ಸಾಗುತ್ತಿದ್ದ ವೇಳೆ ವರದಿಗಾರ್ತಿ ಕಂಟೈನರ್‌ನಿಂದ ನೆಲದ ಮೇಲೆ ಬಿದ್ದಿದ್ದಾಳೆ. ಈ ವೇಳೆ ಟ್ರಕ್ ಆಕೆಯ ಮೇಲೆ ಹರಿದಿದೆ. ದುರಂತ ಘಟನೆಯ ನಂತರ, ಖಾನ್‌ ಅವರು ದಿನದ ಚಟುವಟಿಕೆಗಳನ್ನು ರದ್ದುಗೊಳಿಸಿದರು. ಘಟನೆಯ ಬಗ್ಗೆ ಟ್ವೀಟ್ ಮಾಡಿದ ಇಮ್ರಾನ್ ಖಾನ್, ʻಇಂದು ನಮ್ಮ ರ‍್ಯಾಲಿಯ ವೇಳೆ ವರದಿಗಾರ್ತಿ ಸದಾಫ್ ನಯೀಮ್ ಅವರ ಭೀಕರ ಅಪಘಾತ ನಮಗೆ ಆಘಾತ ತಂದಿದೆʼ ಎಂದು ದುಖಃ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ.