ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡಲು ರಜೆ ಕೊಡಿ; ಅರ್ಜಿ ಬರೆದ ಕಾನ್ಸ್‌ಟೇಬಲ್

ಪತ್ನಿ ಕೋಪಿಸಿಕೊಂಡಿದ್ದಾಳೆ, ಸಮಾಧಾನ ಮಾಡಲು ರಜೆ ಕೊಡಿ; ಅರ್ಜಿ ಬರೆದ ಕಾನ್ಸ್‌ಟೇಬಲ್

ಪತ್ನಿ ಕೋಪಿಸಿಕೊಂಡಿದ್ದಾಳೆ ಸಮಾಧಾನ ಪಡಿಸಬೇಕು ಎಂದು ಉತ್ತರಪ್ರದೇಶದ ಕಾನ್ಸ್‌ಟೇಬಲ್‍ನೊಬ್ಬ ಬರೆದಿರುವ ರಜಾ ಅರ್ಜಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕಾನ್ಸ್‌ಟೇಬಲ್‍ ಕಳೆದ ತಿಂಗಳು ವಿವಾಹವಾಗಿದ್ದರು. ಅಂದಿನಿಂದ ಅವರು ಮಹಾರಾಜ್‍ಗಂಜ್ ಜಿಲ್ಲೆಯ ನೌತಾನ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ಇಂಡೋ-ನೇಪಾಳ ಗಡಿಯಲ್ಲಿರುವುದರಿಂದ ಅವರಿಗೆ ರಜೆ ಸಿಗುತ್ತಿರಲಿಲ್ಲ. ಇದರಿಂದಾಗಿ ತನ್ನ ಊರಿಗೂ ಹೋಗಲು ಆಗುತ್ತಿರಲಿಲ್ಲ. ಅದಕ್ಕಾಗಿ ಅರ್ಜಿ ಬರೆದಿದ್ದಾರೆ.