ಪಂದ್ಯದ 47ನೇ ಓವರ್‍ವರೆಗೂ ದ್ವಿಶತಕದ ಬಗ್ಗೆ ಚಿಂತಿಸಿರಲಿಲ್ಲ ಎಂದ ಗೀಲ್
ಮುತ್ತಿನನಗರಿ ಹೈದರಾಬಾದ್‍ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಶುಭಮನ್ ಗಿಲ್ ಚೊಚ್ಚಲ ದ್ವಿಶತಕ ಬಾರಿಸಿದ್ದರು. ಅವರು ತಮ್ಮ ಬ್ಯಾಟ್‍ಗಳಿಂದ ರನ್‍ಗಳ ಮಳೆ ಸುರಿಸಿದ್ದು 149 ಎಸೆತೆಗಳಲ್ಲಿ 19 ಬೌಂಡರಿ, 9 ಸಿಕ್ಸರ್ ಸಿಡಿಸಿ 208 ರನ್ ಗಳಿಸಿದ್ದರು. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ ಅವರು ಪಂದ್ಯದ 47ನೇ ಓವರ್‍ವರೆಗೂ ತನ್ನ ಶತಕದ ಕುರಿತು ಚಿಂತಿಸಿರಲಿಲ್ಲ ಎಂದಿದ್ದಾರೆ.