ನಾಳೆಯಿಂದ 15ನೇ ಹಾಕಿ ವಿಶ್ವಕಪ್; ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಭಾರತ

ಭುವನೇಶ್ವರ: ಶುಕ್ರವಾರದಿಂದ ಒಡಿಶಾದ ಭುವನೇಶ್ವರ-ರೂರ್ಕೆಲಾದಲ್ಲಿ 15ನೇ ಹಾಕಿ ವಿಶ್ವಕಪ್ ಕೂಟವು ಆರಂಭವಾಗಲಿದೆ. ರಾಜ್ಯದ ಎರಡು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯಲಿವೆ. ಇದರಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿವೆ. ತಲಾ 4 ತಂಡಗಳನ್ನು ಎ,ಬಿ,ಸಿ,ಡಿ ಎಂದು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಹರ್ಮನ್‌ಪ್ರೀತ್ ನಾಯಕತ್ವದ ಭಾರತ “ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೋಕಿಯೋ ಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿರುವ ಭಾರತ ತಂಡ ಕನಿಷ್ಠ ಫೈನಲ್‌ಗೇರುವ ವಿಶ್ವಾಸದಲ್ಲಿದೆ.