'ನಟಿ ರಮ್ಯ' ನಿರ್ಮಾಣದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರಕ್ಕೆ ಕಾನೂನು ಸಂಕಷ್ಟ: 'ಟೈಟಲ್' ಬಳಸದಂತೆ ತಡೆ

ಬೆಂಗಳೂರು: ಮೋಹಕ ತಾರೆ ರಮ್ಯ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರಕ್ಕೆ, ಈಗ ಕಾನೂನು ಸಂಕಷ್ಟ ಎದುರಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಚಿತ್ರದ ಟೈಟಲ್ ಬಳಸದಂತೆ ತಡೆ ತಂದಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು, 1990ರಲ್ಲಿ ನಿರ್ದೇಶನ ಮಾಡಿದ್ದಂತ ಬಣ್ಣದ ಗೆಜ್ಜೆ ಚಿತ್ರದಲ್ಲಿ ಸ್ವಾತಿ ಮುತ್ತಿನ ಮಳೆಯೇ ಹಾಡು ಸೂಪರ್ ಹಿಟ್ ಆಗಿದ್ದಂತ ಹಾಡು ಆಗಿದೆ.
ನಾನು ರಮ್ಯ ನಿರ್ಮಾಣದ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಬಳಸದಂತೆ ತಡೆ ತಂದಿದ್ದೇನೆ ಎಂಬುದಾಗಿ ತಮ್ಮ ಕಾನೂನು ಸಮರದ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡಿದರು.
ಅನಾರೋಗ್ಯದಿಂದ 'ಸ್ಯಾಂಡಲ್ ವುಡ್ ಯುವ ನಟ ಧನುಷ್' ನಿಧನ
ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದಂತ ಸ್ಯಾಂಡಲ್ ವುಡ್ ಯುವ ನಟ ಧನುಷ್ ( Actor Dhanush ) ಅವರು ನಿಧರಾಗಿರೋದಾಗಿ ತಿಳಿದು ಬಂದಿದೆ.
ಸಂಪಿಗೆ ಹಳ್ಳಿ, ಕೊಟ್ಟಲ್ಲಪ್ಪೋ ಕೈ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟ ಧನುಷ್ ನಟಿಸಿದ್ದರು. ಹೊಸ ಚಿತ್ರವೊಂದರ ಚಿತ್ರೀಕರಣಕ್ಕಾಗಿ ಲಡಾಖ್ ಗೆ ತೆರಳಿದ್ದಂತ ಅವರು, ಅನಾರೋಗ್ಯಕ್ಕೆ ಒಳಗಾಗಿದ್ದರು.
ಲಡಾಕ್ ನಿಂದ ಕರೆತಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದ್ರೇ ಅವರು ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಅಂದಹಾಗೇ ಸ್ಯಾಂಡಲ್ ವುಡ್ ಯುವ ನಟ ಧನುಷ್, ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರಾಗಿದ್ದರು. ಅವರ ಮೂಲ ಹೆಸರು ಶ್ರೀಮುತ್ತರಾಜ್ ಎಂಬುದಾಗಿತ್ತು. ಸಿನಿಮಾಗಾಗಿ ತಮ್ಮ ಹೆಸರನ್ನು ಧನುಷ್ ಎಂಬುದಾಗಿ ಬದಲಾಯಿಸಿಕೊಂಡಿದ್ದರು.
ನಿನ್ನೆ ರಾತ್ರಿ ನಿಧನರಾದಂತ ನಟ ಧುನುಷ್ ಅವರ ಪಾರ್ಥೀವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಾಲಿಗಿದೆ. ಯುವ ನಟ ಧನುಷ್ ನಿಧಕ್ಕೆ ಹಲವು ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತ ಪಡಿಸಿದ್ದಾರೆ.