ದ್ವಿತೀಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ

ದ್ವಿತೀಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆ ಆರಂಭ

ಡುಪಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯಾದ್ಯಂತ 65 ಕಡೆ ಮೌಲ್ಯಮಾಪನ ನಡೆಯುತ್ತಿದ್ದು, ವಿಜ್ಞಾನ ವಿಷಯದ ಮೌಲ್ಯಮಾಪನ ಬೆಂಗಳೂರಿನಲ್ಲಿ ಮಾಡಲಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಯಾವುದೇ ವಿಷಯದ ಮೌಲ್ಯಮಾಪನ ಕೇಂದ್ರ ಇಲ್ಲ.

ಮಂಗಳೂರಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ಕೆಲವು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಯುತ್ತಿದೆ. ಉಡುಪಿ ಜಿಲ್ಲೆಯ ಮೌಲ್ಯಮಾಪಕರು ಮಂಗಳೂರಿಗೆ ಹೋಗಿ ಮೌಲ್ಯಮಾಪನ ಮಾಡುತ್ತಿದ್ದಾರೆ. ಇನ್ನು ವಿಜ್ಞಾನ ವಿಭಾಗದ ಮೌಲ್ಯಮಾಪಕರು ಈಗಾಗಲೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ರಾಜಾದ್ಯಂತ 25 ಸಾವಿರ ಮೌಲ್ಯ ಮಾಪಕರು ಮೌಲ್ಯಮಾಪನ ಕಾರ್ಯ ಶುರು ಮಾಡಿದ್ದಾರೆ. 37 ವಿಷಯದ ಒಟ್ಟು 45 ಲಕ್ಷ ಉತ್ತರ ಪತ್ರಿಕೆಯ ಮೌಲ್ಯಮಾಪನ ಆಗಬೇಕಿದೆ.

ಇಂದು ಎಸೆಸೆಲ್ಸಿ ಪರೀಕ್ಷೆಯಿಲ್ಲ
ಮಾ. 31ರಿಂದ ಆರಂಭಗೊಂಡ ಎಸೆಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಭಾಷೆ ಹಾಗೂ ಗಣಿತ ವಿಷಯದ ಪರೀಕ್ಷೆಗಳು ಪೂರ್ಣಗೊಂಡಿವೆ. ಮಂಗಳವಾರ ಸರಕಾರಿ ರಜೆ ಹಿನ್ನೆಲೆಯಲ್ಲಿ ಪರೀಕ್ಷೆ ಇರಲಿಲ್ಲ. ಬುಧವಾರ ಪರೀಕ್ಷೆ ಇಲ್ಲ. ಗುರುವಾರ ದ್ವಿತೀಯ ಭಾಷೆ (ಇಂಗ್ಲಿಷ್‌, ಕನ್ನಡ) ಪರೀಕ್ಷೆ ನಡೆಯಲಿದೆ.