ಕಲಬುರಗಿಯಲ್ಲಿ ಪ್ರೀತಿಸಿದ ಯುವತಿಗಾಗಿ 'ಇಬ್ಬರು ವಿದ್ಯಾರ್ಥಿಗಳ ನಡುವೆ ಚಾಕು ಇರಿತ' : ದುಷ್ಕರ್ಮಿಗಳು ಎಸ್ಕೇಪ್

ಕಲಬುರಗಿ : ಪ್ರೀತಿಸಿದ ಯುವತಿಗಾಗಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳ ನಡುವೆ ಗಲಾಟೆ ತೀವ್ರಗೊಂಡು ಚಾಕು ಇರಿತಗೊಳಗಾದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದ ದುರಂತ ಘಟನೆ ಬೆಳಕಿಗೆ ಬಂದಿದೆ.
ತಾನು ಪ್ರೀತಿಸುತ್ತಿರುವ ಯುವತಿಗೆ ಇನ್ನೊಬ್ಬ ಗೆಳೆಯ ಪೋನ್ ಕಾಲ್ ಮಾಡಿ ಮಾತನಾಡುವುದನ್ನು ಮನಗಂಡು ಸಿಟ್ಟಿಗೆ ನರ್ಸಿಂಗ್ ವಿದ್ಯಾರ್ಥಿ ಸಂಜೆ ಕಾಲೇಜು ಮುಗಿಸಿಕೊಂಡು ಮನೆಗೆ ಹೋಗುವಾಗ, ಎಹ್ತೇಶಾಮ್ ಎಂಬ ಗೆಳೆಯನಿಗೆ ಕರೆ ಮಾಡಿ, ಕರೆಸಿಕೊಂಡಿದ್ದ ಮುಜಾಮಿಲ್ ಎಂಬ ಮತ್ತೊಬ್ಬ ವಿದ್ಯಾರ್ಥಿ ಮತ್ತು ಆತನ ಇನ್ನಿಬ್ಬರು ಸ್ನೇಹಿತರು, ಎಹ್ತೇಶಾಮ್ ಮೇಲೆ ಚೂರಿ ಇರಿಯುವ ಮೂಲಕ ಗಂಭೀರವಾಗಾಗಿ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ,
ಸ್ಥಳೀಯರು ಕೂಡಲೇ ಎಹ್ತೇಶಾಮ್ ಎಂಬ ನರ್ಸಿಂಗ್ ವಿದ್ಯಾರ್ಥಿಯನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಡ್ಡೂರು ಶ್ರೀನಿವಾಸಲು, ಡಿಸಿಪಿ ಕಲಬುರಗಿ ನಗರ ಮಾಹಿತಿ ನೀಡಿದ್ದಾರೆ.ಸದ್ಯ ಮುಜಿಮಿಲ್ ಸೇರಿದಂತೆ ಮೂವರ ವಿರುದ್ದ ಕಲಬುರಗಿ ನಗರದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಂತರ ಮುಜಮಿಲ್ ಮತ್ತು ಆತನ ಸ್ನೇಹಿತರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ