ದಾವಣಗೆರೆ ಜಿಲ್ಲೆಯ ʼಚನ್ನಗಿರಿ ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆʼ : ರೈತರಿಗೆ ಸಂಕಷ್ಟ, ಕಂಗಾಲು

ದಾವಣಗೆರೆ ಜಿಲ್ಲೆಯ ʼಚನ್ನಗಿರಿ ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆʼ : ರೈತರಿಗೆ ಸಂಕಷ್ಟ, ಕಂಗಾಲು

ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದ್ದು, ಅಡಿಕೆ ಮರಗಳಿಗೆ ವಿಚಿತ್ರ ರೋಗಬಾಧೆ ಕಾಡುತ್ತಿದ್ದು ಕಂಗಾಲಾಗಿದ್ದಾರೆ.

ನಗರದ ಚನ್ನಗಿರಿ ಅಡಿಕೆ ತೋಟದ ಮಾಲೀಕರು ಹತ್ತಾರು ವರ್ಷ ಫಲ ನೀಡಿದ ಅಡಿಕೆಯ ಮರ ಇದ್ದಕ್ಕಿದ್ದಂತೆ ಒಣಗುವುದರ ಜೊತೆಗೆ ಅಡಿಕೆ ಉದುರುತ್ತಿದೆ. ಮೇಲಾಗಿ ಅಡಿಕೆ ಮರದ ಬೇರುಗಳು ಕೊಳೆತು ಹೋಗಲು ಶುರುವಾಗಿದ್ದು ಇದರಿಂದ ರೈತರಲ್ಲಿ ಆತಂಕ ಶುರುವಾಗಿದೆ. ಈ ಭಾಗದಲ್ಲಿ ಒಂದೇ ತಾಲೂಕಿನಲ್ಲಿ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯುತ್ತಾರೆ. ಚನ್ನಗಿರಿ ಕೆಂಪು ಅಡಿಕೆ ಅಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಉತ್ತಮ ಹೆಸರಿದೆ.

ಇದಕ್ಕೆ ಅಗತ್ಯ ಸಿಂಫರಣಾ ಕ್ರಮಗಳಲ್ಲಿ ಕಾಫರ್​ ಆಕ್ಸಿ ಕ್ಲೋರೈಡ್​ಹೇಳುವ ಶೀಲಿಂಧ್ರ ನಾಶಕವನ್ನ 3 ಲೀಟರ್​ ನೀರಿನ ಜೊತೆ ಬ್ಯಾಕ್ಟಿರೀಯಾ ನಾಶಕವನ್ನ ಬೇರೆಸಿ ಎಲೆಗಳ ಮೇಲೆ ಮತ್ತು ಕೆಳಭಾಗಕ್ಕೆ ಸಿಂಪಡನೆ ಮಾಡಬೇಕಾಗಿದೆ ಪರಿಸ್ಥಿತಿ ಎದುರಾಗಿದೆ. ಮುಂದಿನ ದಿನಗಳಲ್ಲಿ ರೋಗ ಬಾಧೆಯನ್ನು ತಡೆಯೋದಕ್ಕೆ ರೈತರು ಔಷಧಿ ಸಿಂಪಡನೆ ಮಾಡುವ ಮೂಲಕ ಎಚ್ಚರಿಕೆ ವಹಿಸಬೇಕಾಗಿದೆ. ಇಲ್ಲವಾದರಲ್ಲಿ ವಿಚಿತ್ರ ರೋಗ ಬಾಧೆಯಿಂದ ರೈತರ ಜೀವನೋಪಾಯಕ್ಕಾಗಿ ಸಂಕಷ್ಟ ಎದುರಾಗುವ ಎಲ್ಲಾಸಾಧ್ಯತೆಗಳಿವೆ.