ತಮ್ಮದೇ ಸರ್ಕಾರವನ್ನು ಟೀಕಿಸಿದ್ದ ಬಿಹಾರ ಕೃಷಿ ಸಚಿವ ದಿಢೀರ್‌ ರಾಜೀನಾಮೆ

ತಮ್ಮದೇ ಸರ್ಕಾರವನ್ನು ಟೀಕಿಸಿದ್ದ ಬಿಹಾರ ಕೃಷಿ ಸಚಿವ ದಿಢೀರ್‌ ರಾಜೀನಾಮೆ

ಟ್ನಾ: ತಮ್ಮ ಟೀಕೆಗಳ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಮುಜುಗರವುಂಟು ಮಾಡಿದ್ದ ಕೃಷಿ ಸಚಿವ ಸುಧಾಕರ್ ಸಿಂಗ್ ಅವರು ಶನಿವಾರ ರಾಜೀನಾಮೆ ನೀಡಿದ್ದಾರೆ. ಈ ವಿಷಯವನ್ನು ಆರ್‌ಜೆಡಿಯ ರಾಜ್ಯ ಘಟಕದ ಅಧ್ಯಕ್ಷ ಮತ್ತು ಸುಧಾಕರ್‌ ಸಿಂಗ್‌ ಅವರ ತಂದೆ, ಜಗದಾನಂದ್ ಸಿಂಗ್ ಅವರು ಖಚಿತಪಡಿಸಿದ್ದಾರೆ.

ಸುಧಾಕರ್‌ ಸಿಂಗ್‌ ಸದಾ ರೈತರ ಪರ ಧ್ವನಿ ಎತ್ತುವ ವ್ಯಕ್ತಿ. ಮೈತ್ರಿಯಲ್ಲಿನ 'ಬಿರುಕು' ಹೆಚ್ಚಾಗುವುದನ್ನು ತಡೆಯಲು ಸುಧಾಕರ್‌ ಸಿಂಗ್‌ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಜಗದಾನಂದ ಸಿಂಗ್‌ ಹೇಳಿದ್ದಾರೆ. ತಮ್ಮದೇ ಇಲಾಖೆಯಲ್ಲಿನ ಭ್ರಷ್ಟಾಚಾರದ ಕುರಿತು ಇತ್ತೀಚೆಗೆ ಅವರು ಆಡಿದ್ದ ಮಾತುಗಳು ಬಿಹಾರದ ಮೈತ್ರಿ ಸರ್ಕಾರಕ್ಕೆ ಮುಜುಗರವುಂಟು ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯೆಗೆ ಸುಧಾಕರ್‌ ಲಭ್ಯರಾಗಿಲ್ಲ.