ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ

ಸಿಎಂ ಬಸವರಾಜ್ ಬೊಮ್ಮಾಯಿ ಆದೇಶದ ಹಿನ್ನೆಲೆ ನೂತನ ಕುಮಾರಿ ಅವರಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಲಾಗಿದೆ.

ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ನೂತನ ಕುಮಾರಿ ಅವರಿಗೆ ಸರ್ಕಾರಿ ಕೆಲಸ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದರು.ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ನೂತನ ಕುಮಾರಿ ನೇಮಕಾತಿ ಆದೇಶ ಪತ್ರ ಮತ್ತು ಸಂಬಂಧಿಸಿದ ದಾಖಲಾತಿಗಳನ್ನು ಸಲ್ಲಿಕೆ ಮಾಡಿ ಕೆಲಸಕ್ಕೆ ಹಾಜರಾದರು.ಪ್ರವೀಣ್ ನೆಟ್ಟಾರು ಕೊಲೆಯ ಬಳಿಕ ಅವರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿತ್ತು. ಕುಟುಂಬ ನಿರ್ವಹಣೆ ಹಿನ್ನೆಲೆ ಅನುಕಂಪ ಆಧಾರದ ಮೇಲೆ ನೂತನ ಕುಮಾರಿಗೆ ಉದ್ಯೋಗ ನೀಡಲಾಗಿದೆ.ಆರಂಭದಲ್ಲಿ ಬೆಂಗಳೂರಿನ ಸಿಎಂ ಕಚೇರಿಯಲ್ಲಿಯೇ ಕೆಲಸ ಸಿಕ್ಕಿತ್ತು. ಆದರೆ ನೂತನ ಕುಮಾರಿ ಮಂಗಳೂರಿನಲ್ಲಿಯೇ ಕೆಲಸ ಮಾಡಲು ಬಯಸಿದ್ದರು. ಈ ಸಂಬಂಧ ಸಿಎಂ ಬಳಿಯೂ ಮನವಿ ಮಾಡಿಕೊಂಡಿದ್ದರು.ನೂತನ ಕುಮಾರಿ ಅವರ ಮನವಿಗೆ ಸ್ಪಂದಿಸಿರುವ ಸಿಎಂ ಬೊಮ್ಮಾಯಿ, ಗುತ್ತಿಗೆ ಆಧಾರದಡಿ ಮಂಗಳೂರಿನಲ್ಲಿ ಕೆಲಸ ನೀಡಿದ ಆದೇಶ ನೀಡಿದ್ದರು.ಇದು ಗುತ್ತಿಗೆಯ ಕೆಲಸವಾಗಿದ್ದು, ಇಲ್ಲಿ ಉದ್ಯೋಗದ ಭದ್ರತೆ ಇರಲ್ಲ. ಸರ್ಕಾರ ಇಷ್ಟಕ್ಕೆ ಕೈತೊಳೆದುಕೊಳ್ಳದೇ ಸರ್ಕಾರಿ ಉದ್ಯೋಗಿ ಅಂತ ಆದೇಶ ನೀಡಬೇಕು ಎಂದು ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದರು.ಅಕ್ಟೋಬರ್ 7ರಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ನೂತನ ಕುಮಾರಿ ಧನ್ಯವಾದ ಸಲ್ಲಿಸಿದ್ದರು. ಗ್ರೂಪ್ ಸಿ ಹುದ್ದೆಗೆ ನೇಮಕಾತಿ ಹಾಗೂ ಮಂಗಳೂರಿನಲ್ಲೇ ಕಾರ್ಯನಿರ್ವಹಿಸಲು ಅನುವು ಮಾಡಿ ಕೊಟ್ಟಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದರು.ಪ್ರವೀಣ್ ನೆಟ್ಟಾರ್ 36 ವರ್ಷದವರು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸದಸ್ಯ. ಜೊತೆಗೆ ಹಿಂದೂ ಸಂಘಟನೆಗಳ ಜೊತೆಯೂ ಗುರುತಿಸಿಕೊಂಡವರು. ಅಲ್ಲದೇ ಜಿಲ್ಲಾ ಯುವ ಮೋರ್ಚಾದಲ್ಲಿ ಸಕ್ರಿಯನಾಗಿ, ಬಿಜೆಪಿ ಬಲಪಡಿಸಲು ಶ್ರಮಿಸುತ್ತಿದ್ದರು ಎನ್ನಲಾಗಿದೆ.ಸುಳ್ಯ ತಾಲೂಕಿನಲ್ಲಿ ಯುವ ಮೋರ್ಚಾ ಸಂಘಟನೆ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರವೀಣ್ ಸಕ್ರಿಯರಾಗಿದ್ದರು ಅಂತ ಹೇಳಲಾಗುತ್ತಿದೆ. ಜೊತೆಗೆ ಹಿಂದೂ ಸಂಘಟನೆಯಲ್ಲಿ ಚತುರನಾಗಿ ಕರ್ತವ್ಯ ನಿರ್ವಹಿಸ್ತಿದ್ದ, ಜೊತೆಗೆ ಎಲ್ಲ ಕೆಲಸಗಳನ್ನ ಸರಳವಾಗಿ, ಸುಗಮವಾಗಿ ನಿಭಾಯಿಸುತ್ತಿದ್ದರು ಎನ್ನಲಾಗಿದೆ.