ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ 'PSI' ಹಗರಣದ ಕಿಂಗ್ ಪಿನ್ 'ರುದ್ರೇಗೌಡ ಪಾಟೀಲ್'

ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ 'PSI' ಹಗರಣದ ಕಿಂಗ್ ಪಿನ್ 'ರುದ್ರೇಗೌಡ ಪಾಟೀಲ್'

ಲಬುರಗಿ : 545 ಪಿಎಸ್‌ಐ ಹುದ್ದೆ ನೇಮಕಾತಿ ಅಕ್ರಮ ಪ್ರಕರಣದ ಕಿಂಗ್ ಪಿನ್ ರುದ್ರೇಗೌಡ ಪಾಟೀಲ್ ಇದೀಗ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಪಿಎಸ್ ನೇಮಕಾತಿ ಅಕ್ರಮದ ಕಿಂಗ್ ಪಿನ್ ರುದ್ರಗೌಡ ಪಾಟೀಲ್, ನಿನ್ನೆ ಸಿಐಡಿ ಅಧಿಕಾರಿಗಳ ಬಂಧನದ ವೇಳೆಯಲ್ಲಿ ತಪ್ಪಿಸಿಕೊಂಡಿದ್ದನು.

ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಜನರು ಬಯಸಿದರೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾನೆ. ನಾನು ಅಫಜಲಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ, ಮುಂದಿನ ಚುನಾವಣೆಯಲ್ಲೇ ನಾನು ಸ್ಪರ್ಧಿಸುತ್ತೇನೆ, ನಾನು ಎಲ್ಲಿ ಕೂಡ ಓಡಿ ಹೋಗಿಲ್ಲ , ಇಲ್ಲೇ ಇದ್ದೇನೆ ಎಂದಿದ್ದಾರೆ.ಅವರನ್ನು ನಾನು ತಳ್ಳಿ ಓಡಿಹೋಗಿರುವುದು ಸುಳ್ಳು, ನಾನು ಕಾನೂನನ್ನು ಗೌರವಿಸುತ್ತೇ, ಸಿಐಡಿ ವಿರುದ್ದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾನೆ.

ತುಮಕೂರು ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ ಸಂಬಂಧ ಕಿಂಗ್ ಪಿನ್ ರುದ್ರಗೌಡ ಪಾಟೀಲ್ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗೋದಕ್ಕೆ ಸತತವಾಗಿ ಗೈರಾಗಿದ್ದರು. ಈ ಹಿನ್ನಲೆಯಲ್ಲಿ ಮೊನ್ನೆ ರಾತ್ರಿ, ಕಲಬುರ್ಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿರುವಂತ ರುದ್ರಗೌಡ ಪಾಟೀಲ್ ಅವರನ್ನು ಬಂಧಿಸೋದಕ್ಕೆ ಸಿಐಡಿ ಪಿಎಸ್‌ಐ ಆನಂದ್ ತೆರಳಿದ್ದರು.ಸಿಐಡಿ ಪೊಲೀಸರು ಬಂಧ ವಿಷಯ ತಿಳಿದು ರುದ್ರಗೌಡ ಪಾಟೀಲ್ ಪೊಲೀಸರನ್ನೇ ತಳ್ಳಿ ತಪ್ಪಿಸಿಕೊಂಡು ಪರಾರಿಯಾಗಿರೋದಾಗಿ ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಆತನ ಪತ್ತೆ ಮತ್ತು ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ