ಚಿಕ್ಕಬಳ್ಳಾಪುರ ಈಶಾ ಫೌಂಡೇಷನ್ ಮೊದಲ ಬಾರಿ ಅದ್ದೂರಿ ಶಿವರಾತ್ರಿ ಆಚರಣೆ ಕಾರ್ಯಕ್ರಮಗಳ ಸಂಪೂರ್ಣ ವಿವರ
ಚಿಕ್ಕಬಳ್ಳಾಪುರ ತಾಲೂಕಿನ ಅವಲಗುರ್ಕಿ ಗ್ರಾಮದ ಬಳಿ ಇತ್ತೀಚೆಗೆ ಅನಾವರಣಗೊಂಡ 112 ಅಡಿಗಳ ಆದಿಯೋಗಿ ಪ್ರತಿಮೆ ವೀಕ್ಷಿಸಲು ಪ್ರತಿನಿತ್ಯ ಹಲವಾರು ಮಂದಿ ಭೇಟಿ ನೀಡುತ್ತಿದ್ದಾರೆ.
ಅದಲ್ಲದೆ ಈ ವರ್ಷ ಪ್ರಥಮ ಬಾರಿಗೆ ಇಲ್ಲಿ ಶಿವರಾತ್ರಿ ನಡೆಯುತ್ತಿದ್ದು, ಸಕಲ ಸಿದ್ಧತೆಗಳು ಕೂಡ ವಿಜೃಂಭಣೆಯಿಂದ ನಡೆಯುತ್ತಿದೆ.
112 ಅಡಿಗಳ ಆದಿಯೋಗಿ ಪ್ರತಿಮೆ ಅನಾವರಣ ಮಾಡಿದ ನಂತರ ಇದೇ ಮೊದಲ ಭಾರಿಗೆ ಶಿವಾರಾತ್ರಿ ಆಚರಿಸುತ್ತಿರುವುದರಿಂದ ಮೊದಲ ದಿನದಂದು ಆದಿಯೋಗಿಗೆ ಮಣ್ಣಿನ ದೀಪದ ಆರತಿ ಅರ್ಪಿಸಬಹುದು,
ಯೋಗೇಶ್ವರ ಲಿಂಗಕ್ಕೆ ಅಭಿಷೇಕ ಮಾಡಬಹುದು, ನಾಗಪೂಜೆ ಯಲ್ಲಿ ಭಾಗಿಯಾಗಬಹುದು.
ಫೆಬ್ರವರಿ 18 ರಂದು ಬೆಳಿಗ್ಗೆ 6 ರಿಂದ ಫೆಬ್ರವರಿ 19 ರ ರಾತ್ರಿ 8 ರವರೆಗೆ ಯೋಗೇಶ್ವರ ಲಿಂಗದ ಹೊರ ಗರ್ಭಗುಡಿಯಲ್ಲಿ ದೀಪವನ್ನು ಅರ್ಪಿಸಬಹುದು.
ಫೆಬ್ರುವರಿ 18 ರಂದು ಬೆಳಿಗ್ಗೆ 8 ಗಂಟೆಯಿಂದ ಮರುದಿನ ರಾತ್ರಿ 8 ಗಂಟೆಯವರೆಗೆ ಸದ್ಗುರು ಸನ್ನಿಧಿಯಲ್ಲಿ ನಾಗಪೂಜೆ ಮತ್ತು ಯೋಗೇಶ್ವರ ಲಿಂಗ ಅಭಿಷೇಕವನ್ನು ಸಹ ಸಲ್ಲಿಸಬಹುದು ಎಂದು ಈಶಾ ಫೌಂಡೇಷನ್ ನ ಮಾಧ್ಯಮ ವಕ್ತಾರರು ತಿಳಿಸಿದ್ದಾರೆ.